ಶ್ರೀನಿವಾಸ ಸಿರನೂರಕರ್ ಅವರಿಗೆ ಜಯಾಚಾಯ೯ ದತ್ತಿ ಪ್ರಶಸ್ತಿ

ಕಲಬುರಗಿ:ಏ.1- ಪತ್ರಕತ೯, ಸಾಹಿತಿ ಮತ್ತು ಅಂಕಣಕಾರ ಶ್ರೀನಿವಾಸ ಸಿರನೂರಕರ್ ಅವರಿಗೆ ದಿ.ಕೆ.ಜಯಾಚಾಯ೯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಯಚೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ರಾಯಚೂರಿನ ಶೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ದಾಸ ವೈಭವ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಖ್ಯಾತ ದಾಸ ಸಾಹಿತಿ ಡಾ.ಜಯಲಷ್ಮೀ ಮಂಗಳಮೂತಿ೯ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ಸಿರನೂರಕರ್ ಅವರು “ದಾಸ ಸಾಹಿತ್ಯದಲ್ಲಿ ಮತ ನಿರಪೇಕ್ಷಣೆಯ ನಿಲುವುಗಳು” ವಿಷಯದ ಮೇಲೆ ಜಯಾಚಾಯ೯ ಕೊಪ್ಪರ, ಡಾ.ಮಂದಾಕಿನಿ ಮತ್ತು ಪ್ರಹ್ಲಾದಾಚಾರ್ಯ ಜೋಶಿ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ನೀಡಿದರು.
ಕನ್ನಡ ಹರಿದಾಸ ಸಾಹಿತ್ಯ ತನ್ನ ಚರಿತ್ರೆಯುದ್ದಕ್ಕೂ ಮತೀಯ ಹಾಗೂ ಸಾಮಾಜಿಕ ಸೌಹಾರ್ದತೆ ಮತ್ತು ಸಾಮರಸ್ಯಕ್ಕಾಗಿ ತನ್ನದೇ ಆದ ವಿಶಿಷ್ಟ ಬಗೆಯಲ್ಲಿ ಶ್ರಮಿಸುತ್ತಾ ಬಂದಿದೆ ಎಂದು ಹೇಳಿದ ಸಿರನೂರಕರ್ ತನ್ನ ಮತನಿರಪೇಕ್ಷಣ ತತ್ವದಿಂದಾಗಿಯೇ ೧೯ನೇ ಶತಮಾನದಲ್ಲಿಯೇ ದಾಸ ಸಾಹಿತ್ಯ ಜಮ೯ನ್ ಪಾದ್ರಿಗಳನ್ನು ಆಕಷಿ೯ಸಿ ಜಮ೯ನ್ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡು ಜಾಗತೀಕರಣಕ್ಕೆ ಒಳಗಾಯಿತು ಎಂದು ನುಡಿದರು.
ಡಾ.ಜಯಲಷ್ಮೀ ಮಂಗಳಮೂತಿ೯, ಡಾ.ರಾಜೇಂದ್ರ ಕುಮಾರ್ ಮತ್ತು ತ್ರಿವಿಕ್ರಮ ಜೋಶಿ ಅವರು ಈ ದತ್ತಿಗಳನ್ನು ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ.
ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿದ್ದರು. ಮುರಳೀಧರ ಕಾಯ೯ಕ್ರಮ ನಿವ೯ಹಿಸಿದರು.