ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

ಬೆಂಗಳೂರು,ಏ.1- ನೀರಿನಲ್ಲಿ ಫೋಟೋ ಶೂಟ್ ​ ಮಾಡುವಾಗ ಮುಳುಗಿ ಇಬ್ಬರು ವಿದ್ಯಾರ್ಥಿನಿಯರು ಸೇರಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.
ಸಾರಾಯಿಪಾಳ್ಯದ ಬಿ ಫಾರ್ಮ ವಿದ್ಯಾರ್ಥಿಗಳಾದ ರಾಧಿಕಾ(21),
ಇಮ್ರಾನ್(21), ಪೂಜಾ(21) ಮೃತಪಟ್ಟವರು.
ನಗರದಿಂದ ಶ್ರೀನಿವಾಸ ಸಾಗರ ಜಲಾಶಯಕ್ಕೆ ರಾಧಿಕಾ, ಇಮ್ರಾನ್, ಪೂಜಾ ಸೇರಿ ಒಟ್ಟು ಆರು ಬಂದಿದ್ದಾರೆ. ಮೂರು ಬೈಕ್​ಗಳಲ್ಲಿ ಚಿಕ್ಕಬಳ್ಳಾಪುರ ತಾಲುಕಿನ ಶ್ರೀನಿವಾಸಸಾಗರ ಜಲಾಶಯದ ಬಳಿ ಆಗಮಿಸಿ ನೀರಿನಲ್ಲಿ ಜಾಲಿಯಾಗಿ ಆಟವಾಡುತ್ತ, ತಂದಿದ್ದ ಡಿಎಸ್​ಎಲ್​ಆರ್ ಕ್ಯಾಮೆರಾದಲ್ಲಿ ಶೂಟ್ ಶೂಟ್ ಮಾಡುತ್ತಿದ್ದರು.
ಆದರೆ ನೀರಿನಲ್ಲಿ ಒಳ ಹೋಗುತ್ತಾ ಹೋಗುತ್ತಾ ಪೂಜಾ ನೀರಿನಲ್ಲಿ ಮುಳುಗಿದ್ದಾಳೆ. ಪೂಜಾಳ ರಕ್ಷಣೆಗೆ ರಾಧಿಕಾ ಹೋಗಿದ್ದಾಳೆ, ಇಬ್ಬರ ರಕ್ಷಣೆಗೆ ಇಮ್ರಾನ್ ತೆರಳಿ ಮೂವರು ನೀರು ಪಾಲಾಗಿದ್ದಾರೆ.
ಪೂಜಾ, ರಾಧಿಕಾ ಹಾಗೂ ಇಮ್ರಾನ್ ನೀರಿನಲ್ಲಿ ಮುಳುಗಿ, ನಂತರ ವಿಕಾಶ್​ ಕಿರುಚಾಡುತ್ತಿದ್ದ ಕಾರಣ ಚನ್ನರಾಜ್ ತಕ್ಷಣ ನೀರಿನಲ್ಲಿ ಆಚೆ ಬಂದು ಪಕ್ಕದ ತೋಟದ ಹತ್ತಿರ ಹೋಗಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ತಕ್ಷಣ ಸ್ಥಳಿಯ ರೈತರು ಬಂದು ವಿಕಾಶ್​ನನ್ನು ರಕ್ಷಿಸಿ ಪೂಜಾಳನ್ನು ಆಚೆ ತಂದಿದ್ದಾರೆ. ಆದರೆ ಅಷ್ಟೊತ್ತಿಗೆ ಮೃತಪಟ್ಟಿದ್ದಾಳೆ.
ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳಿಯ ಮೀನುಗಾರರು, ಮೃತರ ಶವಗಳನ್ನು ಮೇಲೆ ತಂದು ಆಸ್ಪತ್ರೆಗೆ ಸಾಗಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.