ಶ್ರೀನಿವಾಸ ಮೂರ್ತಿ ಗೌರವ ಡಾಕ್ಟರೇಟ್


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.31: ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಇಂಟರ್ ನ್ಯಾಷನಲ್ ಅಕ್ರೆಡಿಟೇಶನ್ ಸಂಸ್ಥೆಯಿಂದ ಜ್ಯೋತಿಷ್ಯ ಮತ್ತು ಸಾಮಾಜಿಕ ಸೇವೆಯ ವರ್ಗಕ್ಕೆ ಕೊಡಮಾಡಲ್ಪಡುವ ಈ ಗೌರವ ಡಾಕ್ಟರೇಟ್ ಪದವಿಗೆ ತಾಲ್ಲೂಕಿನ ಜೆ.ಶ್ರೀನಿವಾಸ ಮೂರ್ತಿ  ಡಾಕ್ಟರೇಟ್ ಪದವಿಗೆ ಭಾಜನರಾದರು.
ಸುಧೀರ್ಘ ಜ್ಯೋತಿಷ್ಯ ಶಾಸ್ತ್ರದ ಸಾಧನೆಗಳ ಜೊತೆಗೆ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಕೊಂಡು ಸರ್ಕಾರದ ಯೋಜನೆಗಳನ್ನು ಕಾಲ ಕಾಲಕ್ಕೆ ಸಾರ್ವಜನಿಕರಿಗೆ ತಲುಪಿಸುವ ಸೇವಾ ಕಾರ್ಯಗಳನ್ನು ಮಾಡುತ್ತಿರುವುದನ್ನು ಗುರುತಿಸಿ ಈ ಪದವಿ ಪ್ರದಾನ ಮಾಡಲಾಗಿದೆ ಎಂದು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯು ತನ್ನ ಪ್ರಶಂಸನಾ ಪತ್ರದಲ್ಲಿ ತಿಳಿಸಿದೆ.
ಇವರ ಪ್ರೊಫೈಲ್ ಅನ್ನು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ (ASIA ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ) ಆಡಳಿತವು ಅನುಮೋದಿಸಿ ಈ ಪದವಿ ನೀಡಿದೆ
ಗೌರವ ಡಾಕ್ಟರೇಟ್ ಪದವಿಯನ್ನು ನೆರೆ ರಾಜ್ಯದ ತಮಿಳುನಾಡು ಹೊಸೂರಿನ ಕ್ಲರೆಸ್ಟಾ ಹೋಟೆಲ್ಲುಗಳ ಸಮುಚ್ಛಾಯದ ಸಭಾಂಗಣದಲ್ಲಿ 2023 ಜೂಲೈ 29 ರಂದು ಗಣ್ಯಾತಿಗಣ್ಯರಾದ ಅಕಾಡೆಮಿಯ ಸಂಸ್ಥಾಪಕ ವಿ ಬಾಬು ವಿಜಯನ್, ಮಾಜಿ ಶಾಸಕ ಡಾ. ಮನೋಕರನ್, ಡಾ ಎಸ್. ನಾರಾಯಣನ್, ಸಿಬಿಡಿಎ ಸಂಸ್ಥಾಪಕ ಆರ್ ಬಾಲಾಜಿ, ಡಾ ರವಿಚಂದ್ರನ್, ಡಾ ಎಂ. ಪವನ ಕಲ್ಯಾಣನ್, ಜಾನ್ ಮಾರ್ಟಿನ್, ಡಾ ಬಸವ ಯೋಗಿ ಗುರೂಜಿ, ಶ್ರೀ ಶಿವಕುಮಾರ ಆರ್ ಎಂ ಕುಂಬಾರ್ ಸೇರಿದಂತೆ ಅನೇಕರ ಸಮ್ಮುಖದಲ್ಲಿ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಲಾಯಿತು
ಜೆ ಶ್ರೀನಿವಾಸ ಮೂರ್ತಿ ತಮ್ಮ ಕುಟುಂಬದೊಂದಿಗೆ ತೆರಳಿ ಪದವಿ ಸ್ವೀಕರಿಸುತ್ತಿದ್ದಂತೆ ಬಂಧು ಮಿತ್ರ ವರ್ಗದವರಲ್ಲಿ ಅತ್ಯಂತ ಸಂತಸದ ಕ್ಷಣಗಳು ಕಂಡು ಬಂದವು
ಈ ವೇಳೆ ಡಾಕ್ಟರೇಟ್ ಪದವಿಗೆ ಭಾಜನರಾದ ಜೆ ಶ್ರೀನಿವಾಸ ಮೂರ್ತಿ ಮಾತನಾಡಿ ಈ ಪದವಿಯಿಂದಾಗಿ ನನ್ನ ಜವಾಬ್ದಾರಿ ಹೆಚ್ಚಾಗಿದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೊನೆ ಎಂಬುದೇ ಇಲ್ಲ. ಹೆಚ್ಚಿನ ಸಾಧನೆ ಮಾಡುತ್ತಲೇ ಇದ್ದೇನೆ. ಇತರರಿಗೆ ಒಳಿತು ಮಾಡುವ ಮೂಲಕ ಸಮಾಜ ಸೇವೆ ಮಾಡುವುದು ನನಗೆ ಆತ್ಮ ಸಂತೃಪ್ತಿ ನೀಡುತ್ತದೆ ಎಂದರು.