ಶ್ರೀನಿವಾಸ ಕಲ್ಯಾಣೋತ್ಸವ ಸಂಭ್ರಮ

(ಸಂಜೆವಾಣಿ ವಾರ್ತೆ)
ನವಲಗುಂದ,ಅ20 : ನಗರದ ಗುಡ್ಡುದಕೆರಿ ಓಣಿಯ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀನಿವಾಸ-ಪದ್ಮಾವತಿ ಕಲ್ಯಾಣೋತ್ಸವ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
`ಕಲಿಯುಗದಲ್ಲಿ ಶ್ರೀಹರಿಯು ಶ್ರೀನಿವಾಸನಾಗಿ ಅವತರಿಸಿ ಪದ್ಮಾವತಿ ಯನ್ನು ವರಿಸುವ ಸಂದರ್ಭದಲ್ಲಿ ದೇವಾ ನುದೇವತೆಗಳು ಭೂಮಂಡಲದಲ್ಲಿ ನೆರೆದು ಹೂಮಳೆಗರೆದರು ಎಂಬ ಪ್ರತೀತಿ ಇದೆ’ ಎಂದು ಮಹೇಶ್ ಭಟ್, ಗುರುಭಟ್ ಜೋಶಿ ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ನೀಲಕಂಠ ಕುಲಕರ್ಣಿ, ದತ್ತಣ್ಣ ಆನೆಗುಂದಿ, ರವೀಂದ್ರ ಪಾಠಕ, ರಾಮಣ್ಣ ಕುಲಕರ್ಣಿ, ವಿಜಯ್ ಕುಮಾರ್ ಪಾಠಕ್, ಮುರುಳಿ ಹೇಬಸೂರ, ರಾಘವೇಂದ್ರ ಕೃಷ್ಣಜಿ ಪಾಟೀಲ, ರಜನಿ ರಾಘವೇಂದ್ರ ಪಾಟೀಲ್, ವೀಣಾ ಹೇಬಸೂರ, ಗೀತಾ ರಟ್ಟಿಹಳ್ಳಿ, ಶ್ರೀದೇವಿ ಹೆಬ್ಸೂರು, ಶ್ರೀದೇವಿ ಆನೆಗುಂದಿ, ರಾಜೇಶ್ವರಿ ಆನೆಗುಂದಿ ಉಪಸ್ಥಿತರಿದ್ದರು.