ಮಾಲೂರು:ತಾಲೂಕಿನ ನೂಸಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುರಳಗೆರೆ ಗ್ರಾಮದಲ್ಲಿ ಸರ್ವೇಣಿಯರ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದಲಿತ ಕುಟುಂಬದ ಶ್ರೀನಿವಾಸ್ ಅವರು ಹುರಳಗೆರೆ ಗ್ರಾಮದ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಗ್ರಾಪಂ ಅಧ್ಯಕ್ಷ ಬ್ಯಾಲಹಳ್ಳಿ ಚಂದ್ರಶೇಖರ್ ಸಹಾಯ ಹಸ್ತ ನೀಡಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬ್ಯಾಲಹಳ್ಳಿ ಕೆ.ಚಂದ್ರಶೇಖರ್ ಮಾತನಾಡಿ ಹುರಳಗೆರೆ ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ಶ್ರೀನಿವಾಸ ಆತ್ಮಹತ್ಯೆ ಮಾಡಿಕೊಳ್ಳುವ ಕೆಲಸ ಮಾಡಬಾರದ್ದಿತ್ತು ಸುಣ್ಣ ಪುಟ್ಟ ಘಟನೆಗಳು ನಡೆದರೆ ಕಾನೂನಿನ ಮೂಲಕ ನ್ಯಾಯ ಪಡೆಯಬಹುದ್ದಿತ್ತು ಎಂದರು.
ಈ ಕುಟುಂಬಕ್ಕೆ ನೂಸಗೆರೆ ಗ್ರಾಮ ಪಂಚಾಯಿತಿಯಿಂದ ಸಿಗುವ ಸೌಲಭ್ಯಗಳನ್ನು ನೀಡಲಾಗುವುದು ಶೀಘ್ರದಲ್ಲೇ ಈ ಕುಟುಂಬಕ್ಕೆ ಸರ್ಕಾರ ವಸತಿ ಯೋಜನೆಯಲ್ಲಿ ಮನೆಯನ್ನು ನಿರ್ಮಾಣ, ಪಡಿತರ ಚೀಟಿ ಇಲ್ಲದೆ ಇರುವ ಕಾರಣ ಪಡಿತರ ಚೀಟಿಯನ್ನು ಮಾಡಿಸಿಕೊಡಲಾಗುವುದು. ಈ ಕುಟುಂಬಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ದಸಂಸ ಖಂಜಾಚಿ ಚಿಕ್ಕಾಪುರ ಶ್ರೀನಿವಾಸ್, ಗ್ರಾ.ಪಂ.ಸದಸ್ಯೆ ಜಯಶ್ರೀ ನಾಗರಾಜ್, ಗ್ರಾ.ಪಂ. ಕಾರ್ಯದರ್ಶಿ ವಿಶ್ವನಾಥ್, ದ್ವೀತಿಯ ದರ್ಜೆ ಸಹಾಯಕ ಪ್ರಸನ್ನ, ಬಿಲ್ ಕಲೆಕ್ಟರ್ ವೆಂಕಟೇಶ್ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.