ಶ್ರೀನಿವಾಸ್ ಆಶಾಪೂರ ಕಲಾ ಸೌರಭ ಪ್ರಶಸ್ತಿಗೆ ಆಯ್ಕೆ

ರಾಯಚೂರು,ಮಾ.೨೭- ಸಂಗೀತ ಕಲಾವಿದ ಶ್ರೀನಿವಾಸ್ ಆಶಾಪೂರ ಅವರನ್ನು ರಾಜ್ಯಮಟ್ಟದ ಕರ್ನಾಟಕ ಕಲಾ ಸೌರಭ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕ ಪ್ರೆಸ್ ಆಂಡ್ ಡಿಜಿಟಲ್ ಮೀಡಿಯಾ ಅಸೋಸಿಯೇಶನ್ ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ, ಶ್ರೀ ವರಸಿದ್ಧಿ ವಿನಾಯಕ ಯುವ ಕಲಾ ಸಂಘ, ಮತ್ತು ಕಾಲ್ವೇಕಲ್ಲಾಪುರ ಇವರ ಸಂಯುಕ್ತಾಶ್ರಯದಲ್ಲಿ ಗಾನಯೋಗಿ ಡಾ,ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮದಿನೋತ್ಸವ ಹಾಗೂ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ಯ ಕರ್ನಾಟಕ ಜಾನಪದ ಕಲಾ ಉತ್ಸವ ೨೦೨೪ ರ ರಾಜ್ಯ ಮಟ್ಟದ ಕರ್ನಾಟಕ ಕಲಾ ಸೌರಭ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿ.೩೦ ರಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಮಾವಕೊಪ್ಪ ಶ್ರೀ ಚೌಡೇಶ್ವರಿ ಶ್ರೀ ಭೂತೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದೆ.
ಜಾನಪದ ಸಮಾಜದಲ್ಲಿ ಸಾಧನೆಗ್ಯದ ಜನಮನ ಗೆದ್ದ ಸಂಗೀತ ಕಲಾ ಸೇವಾರತ್ನ ಸಂಗೀತ ಕಲಾವಿದ ಶ್ರೀನಿವಾಸ್ ಆಶಾಪೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವ ಸನ್ಮಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.