ಶ್ರೀನಿವಾಸಪುರದಲ್ಲಿ ಖಾಸಗಿ ಬಸ್‌ಗಳದ್ದೇ ದರ್ಬಾರ್

ಕೋಲಾರ,ಜು,೧೧-ಖಾಸಗಿ ಬಸ್‌ಗಳ ಟಾಪ್ ಮೇಲೆ ಕುಳಿತು ಪ್ರಯಾಣಿಕರು ಸರ್ಕಸ್ ಮಾಡಿರುವ ಶ್ರೀನಿವಾಸಪುರ ತಾಲೂಕಿನಲ್ಲಿ ಖಾಸಗಿ ಬಸ್‌ಗಳದ್ದೆ ದರ್ಬಾರ್ ಆಗಿತ್ತು.
ಶ್ರೀನಿವಾಸಪುರದಿಂದ ಬೆಂಗಳೂರಿಗೆ ತೆರಳಲು ಸರ್ಕಾರಿ ಬಸ್ ವ್ಯವಸ್ಥೆ ಇದ್ದರು ಖಾಸಗಿ ಬಸ್‌ಗಳಲ್ಲೆ ಸಾರ್ವಜನಿಕರು ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು
ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿರುವ ಹಿನ್ನಲೆಯಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರೇ ತುಂಬಿ ತುಳುಕಾಡುತ್ತಿದ್ದ ಹಿನ್ನಲೆಯಲ್ಲಿ ಪುರುಷರು ಖಾಸಗಿ ಬಸ್‌ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಖಾಸಗಿ ಬಸ್ಸುಗಳಲ್ಲಿ ಬಸ್ ಡೋರ್‌ಗಳಲ್ಲಿ ನೇತಾಡಿಕೊಂಡು ಹಾಗೂ ಬಸ್‌ನ ಟಾಪ್ ಮೇಲೆ ಸಾರ್ವಜನಿಕರು ಪ್ರಯಾಣ ಮಾಡುವ ಮೂಲಕ ಸಾವಿನ ಸವಾರಿಯಲ್ಲೂ ಸಾರ್ವಜನಿಕರು ತಮ್ಮ ಊರುಗಳಿಗೆ ಪ್ರಯಾಣ ಮಾಡುವ ಪರಿಸ್ಥಿತಿ ಉಂಟಾಗಿತ್ತು.
ಆಂಧ್ರದ ಮದನಪಲ್ಲಿ ಹಾಗು ಶ್ರೀನಿವಾಸಪುರ ಗಡಿ ಗ್ರಾಮದಿಂದ ಆಗಮಿಸುವ ಖಾಸಗಿ ಬಸ್‌ಗಳಲ್ಲಿ ಜನಸಂದಣಿ ಇದುದ್ದರಿಂದ ನಿಗಧಿತ ಪ್ರಮಾಣದ ಜನರಿಗಿಂತಲೂ ನಿಯಮ ಮೀರಿ ಜನರನ್ನು ಖಾಸಗಿ ಬಸ್ಸುಗಳ ಟಾಪ್ ಮೇಲೆ ಕೂರಿಸಿಕೊಂಡು ಖಾಸಗಿ ಬಸ್‌ಗಳ ಸಂಚಾರ ಮಾಡುತ್ತಿದ್ದರೂ ಸಂಬಂಧಿಸಿದ ಇಲಾಖಾಧಿಕಾರಿಗಳಾದ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗು ಟ್ರಾಫಿಕ್ ಪೊಲೀಸರು ಯಾವುದನ್ನೂ ಕಂಡುಕಾಣದ್ದಂತೆ ವರ್ತಿಸುತ್ತಿರುವುದನ್ನು ಕಂಡ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.