
ಬೆಂಗಳೂರು, ಮೇ. ೩- ಸಾರ್ವತ್ರಿಕ ಚುನಾವಣೆಗೆ ಕೇವಲ ೮ ದಿನಗಳು ಬಾಕಿ ಇದ್ದು, ಇಂದು ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಬಿಟಿಎಂ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಆರ್. ಶ್ರೀಧರ್ ರೆಡ್ಡಿ ಪರ ಅಬ್ಬರದ ಪ್ರಚಾರ ನಡೆಸಿದರು.
ಕರ್ನಾಟಕ ರಾಜ್ಯ ಸುಭದ್ರವಾಗಿರಲು ಮೋದಿ ಸರ್ಕಾರದಿಂದ ಮಾತ್ರ ಸಾಧ್ಯ. ಕೇಂದ್ರ ಹಾಗೂ ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಮಾಡಿದ ಅಭಿವೃದ್ದಿಗಳನ್ನು, ಪ್ರಗತಿಯನ್ನು ಮನ್ನಣೆಗೆ ತೆಗೆದುಕೊಂಡು ಈ ಭಾರಿ ಬಿಜೆಪಿ ಅಭ್ಯರ್ಥಿ ಕೆ.ಆರ್. ಶ್ರೀಧರ್ ರೆಡ್ಡಿಯವರಿಗೆ ಮತ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬಿಟಿಎಂ ಕ್ಷೇತ್ರದ ವ್ಯಾಪ್ತಿಗೊಳಪಡುವ, ಆಡುಗೋಡಿ ಸಿಗ್ನಲ್‌ನಿಂದ ಮಡಿವಾಳ ಟೋಟಲ್ ಮಾಲ್‌ವರೆಗೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ತೆರೆದ ವಾಹನದಲ್ಲಿ ಅಮಿತ್ ಶಾರವರು ರೋಡ್ ಶೋ ನಡೆಸಿದರು. ಈ ವೇಳೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸರ?ಯರವರು ಪಾಲ್ಗೊಂಡು ಕಾರ್ಯಕರ್ತರನ್ನು ಹುರಿದುಂಬಿಸಿದರು. ಎಲ್ಲೆಲ್ಲೂ ಕೇಸರಿ ಶಾಲುಗಳು “ಜೈ ಭಜರಂಗ ಬಲಿ” “ಭಾರತ್ ಮಾತಾ ಕೀ ಜೈ” ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. ತಮಟೆ ವಾದ್ಯ, ಡೊಳ್ಳು ಕುಣಿತ ರೋಡ್ ಶೋ ಉದ್ದಕ್ಕೂ ಪ್ರಮುಖ ಆಕರ್ಷಣೆಯಾಯಿತು. ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸುವ ಸಲುವಾಗಿ ತೇಜಸ್ವಿ ಸರ?ಯರವರು ತಮ್ಮ ಶಾಲನ್ನು ಆಕಾಶದತ್ತ ತಿರುಗಿಸುತ್ತಾ ಘೋಷಣೆಗಳನ್ನು ಕೂಗಿದರು. ಸುಮಾರು ೨ ಕಿ.ಮೀ. ನಷ್ಟು ಸಾಗಿದ ರೋಡ್ ಷೋನಲ್ಲಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಸಾರ್ವಜನಿಕರು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಕೆ.ಆರ್. ಶ್ರೀಧರ್ ರೆಡ್ಡಿಯವರು ಕೇಂದ್ರ ಗೃಹ ಸಚಿವ ಅಮಿತ್ ಶಾ ರವರಿಗೆ ಶಲ್ಯ ಹಾಗೂ ಮೈಸೂರು ಪೇಟವನ್ನು ತೊಡಿಸಿ ಶ್ರೀ ಕೃಷ್ಣ ಭಗವಾನರ ವಿಗ್ರಹವನ್ನು ನೀಡಿ ಸತ್ಕರಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯ ಎಂ.ಎಲ್.ಸಿ. ಗೋಪಿನಾಥ ರೆಡ್ಡಿ, ಬಿಜೆಪಿ ಮುಖಂಡ ಅನಿಲ್ ಶೆಟ್ಟಿ, ಮಂಡಲ ಅಧ್ಯಕ್ಷ ರಾಜೇಂದ್ರ ರೆಡ್ಡಿ, ಬಿಜೆಪಿ ಮುಖಂಡ ಹೆಚ್.ಕೆ. ಮುತ್ತಪ್ಪ, ಬಿಬಿಎಂಪಿ ಮಾಜಿ ಸದಸ್ಯರಾದ ಸರಳಾ ಮಹೇಶ್, ದೇವದಾಸ್ ಸೇರಿದಂತೆ ಹಲವಾರು ಮುಖಂಡರು ರ?ಯಾಲಿಯಲ್ಲಿ ಭಾಗವಹಿಸಿದ್ದರು
ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಆರ್. ಶ್ರೀಧರ್ ರೆಡ್ಡಿ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಬ್ಬರದ ಪ್ರಚಾರ ನಡೆಸಿದರು. ಸಂಸದ ತೇಜಸ್ವಿ ಸೂರ್ಯ ಇದ್ದಾರೆ.