ಶ್ರೀಧರ್ ಕುಲಕರ್ಣಿರನ್ನು ಸೇವೆಯಿಂದ ವಜಾಗೊಳಿಸಲು ಒತ್ತಾಯ

ರಾಯಚೂರು, ಡಿ.೬, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲೆಕ್ಕ ಪತ್ರ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭ್ರಷ್ಟ ನೌಕರನಾದ ಶ್ರೀಧರ ಕುಲಕರ್ಣಿ ಅವರನ್ನು ದ್ವೀತಿಯ ದರ್ಜೆ ಸಹಾಯಕರು ಸೇವೆಯಿಂದ ವಜಾಗೊಳಿಸಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಜನಸೈನ್ಯ ರಾಯಚೂರು ಜಿಲ್ಲಾ ಘಟಕ ಅವರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯಲ್ಲಿ ಲೆಕ್ಕ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಅವರು ದೂರಿದರು.
ಶ್ರೀಧರ್ ಕುಲಕರ್ಣಿ ಅವರು ಉದ್ದೇಶಿತವಾಗಿ ಸರಕಾರದ ಅನುದಾನ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಇವರು ಬರನ್ನೊಬ್ಬರಿ ರೂ.೯,೧೮,೫೩೯ ಲಕ್ಷ ರೂ ಗಳ ಮೊತ್ತದಷ್ಟು ಸರ್ಕಾರದ ಹಣವನ್ನು ವೇತನ ಮತ್ತು ಇತರೇ ಭತ್ಯೆಗಳ ಮೊತ್ತವನ್ನು ದುರುಪಯೋಗ ಪಡಿಸಿಕೊಂಡು ತಮಗೆ ಬೇಕಾದ ಮತ್ತು ಸಂಬಂಧವಿಲ್ಲದವರ ಖಾತೆಗೆ ಜಮಾ ಮಾಡಿರುವುದು ಸಾಕ್ಷಿ ಸಹಿತ ಲಿಖಿತ ರೂಪದ ವರಿದಿಯಲ್ಲಿ ಸ್ಪಷ್ಟವಾಗಿ ಮಾಹಿತಿ ಸಿಕ್ಕಿದ್ದು,ಇದರಲ್ಲಿ ಕರ್ನಾಟಕ ಆರ್ಥಿಕ ಸಂಹಿತೆ ೧೯೫೮ರ ಅಧ್ಯಾಯ ೪ ಕಂಡಿಕೆ ೫೨ ಮತ್ತು ೫೩ರ ನಿಯಮಗಳನ್ನು ಉಲ್ಲಂಘಿಸಿರುವುದು ಸದರಿ ವರದಿಯಲ್ಲಿ ಖಾತರಿಯಾಗಿರುತ್ತದೆ ಎಂದು ಅವರು ಆರೋಪಿಸಿದರು.
ಶ್ರೀಧರ್ ಕುಲಕರ್ಣಿ ಇಷ್ಟೆಲ್ಲಾ ಹಗರಣ ಮಾಡಿರುವುದು ಸಾಕ್ಷಿ ಸಹಿತ ಅಧಿಕಾರಿಗಳ ತನಿಖಾ ವರದಿಯಲ್ಲಿ ಸಾಭೀತಾದರೂ ಶ್ರೀಧರ ಕುಲಕರ್ಣಿ ದ್ವಿ.ದ.ಸ ಅವರ ಮೇಲೆ ಯಾವುದೇ ಕಾನೂನು ಕ್ರಮ ಜರುಗಸಿದೆ ಪುನಃ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲೆಕ್ಕ ಶಾಖೆಯಲ್ಲಿ ಮುಂದುವರೆಸಿರುವುದು ಖಂಡನೀಯ ಎಂದು ಅವರು ಆರೋಪ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಶಾಖೆಯಲ್ಲಿ ಮುಂದುವರೆದು ಸೇವೆ ಮಾಡುತ್ತಿರುವ ಭ್ರಷ್ಟ ನೌಕರರಾದ ಶ್ರೀಧರ ಕುಲಕರ್ಣಿ ದ್ವಿ.ದ.ಸ. ಇವರನ್ನು ನಿಯಮಗಳಡಿಯಲ್ಲಿ ತಕ್ಷಣವೇ ಸೇವೆಯಿಂದ ವಜಾಗೊಳಿಸಿ ಅವರ ವಿರುದ್ಧ ಇಲಾಖೆಯ ವತಿಯಿಂದ ಎಫ್.ಐ.ಆರ್ ದಾಖಲೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಉತ್ತಮ ಆಡಳಿತ ಹಿತದೃಷ್ಟಿಯಿಂದ ಸರ್ಕಾರಿ ದಾಖಲೆಗಳ ರಕ್ಷಣೆ ಹಿತದೃಷ್ಟಿಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ದೂರು ಸಲ್ಲಿಸುತ್ತೇವೆ. ನಮ್ಮ ದೂರನ್ನು ಅತಿ ಜರೂರ ಎಂದು ಭಾವಿಸಿ, ಕ್ರಮ ಜರುಗಿಸಬೇಕು. ಒಂದು ವೇಳೆ ನೀತಿ ವಿಳಂಬ ಅನುಸರಿಸಿದಲ್ಲಿ ಅಥವಾ ಯಾವುದೇ ರೀತಿಯ ರಾಜಕೀಯ ಒತ್ತಡದಿಂದ ಶ್ರೀಧರ್ ಕುಲಕರ್ಣಿ ನನ್ನು ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ನಮ್ಮ ದೂರನ್ನು ಕಡೆಗಣಿಸಿದಲ್ಲಿ ನಮ್ಮ ಸಂಘಟನೆಯ ವತಿಯಿಂದ ಈ ಎಲ್ಲಾ ದಾಖಲೆ ಮತ್ತು ಸಾಕ್ಷಿಗಳ ಸಮೇತ ನಮ್ಮ ಸಂಘಟನೆ ರಸ್ತೆಗಿಳಿದು ತಮ್ಮ ಇಲಾಖೆಯ ವಿರುದ್ಧ ಮತ್ತು ಸಚಿವಾಲಯದ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷರಾದ ವೆಂಕಟೇಶ ಅರಗೋಲ್, ಉಪಾಧ್ಯಕ್ಷ ಎನ್. ಶಾಂತಕುಮಾರ, ಕಾರ್ಯದರ್ಶಿ ಪ್ರಸಾದ ಭಂಡಾರಿ, ವೆಂಕಟಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು.