ಶ್ರೀಧರ್ಮಸ್ಥಳ ಸಂಸ್ಥೆಯಿಂದ 121ಜೋಡಿ ಮದುವೆಗೆ ಆರ್ಥಿಕ ಸಹಾಯ

ಕೂಡ್ಲಿಗಿ.ಮೇ.1:- ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಕೂಡ್ಲಿಗಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವು ನಡೆಯಬೇಕಿತ್ತು ಆದರೆ ಕೋವಿಡ್ ಅಲೆ ಹಾಗೂ ಸರ್ಕಾರದ ನಿಯಮ ಪಾಲನೆಯಂತೆ ತಾಲೂಕಿನ ಸಿಡೆಗಲ್ಲು ದೇವಸ್ಥಾನ ಮತ್ತು ಕುದುರೆಡವು ಗ್ರಾಮದ ವರನ ಸ್ವಗೃಹದಲ್ಲಿ ಶುಭ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು ಹಾಗೂ ರಾಜ್ಯಾದ್ಯಾಂತ ಏಪ್ರಿಲ್ 29ರಂದು 121ಜೋಡಿ ಬಡಕುಟುಂಬದ ವಿವಾಹಕ್ಕೆ ಆರ್ಥಿಕ ಸಹಾಯ ಮಾಡಿದೆ ಎಂದು ಕೂಡ್ಲಿಗಿ ಸಂಸ್ಥೆಯ ಯೋಜನಾಧಿಕಾರಿ ಮಂಜುನಾಥ ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಏ.29.ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೆಡೆಯ ಬೇಕಿದ್ದ 49 ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಈ ಸಲ ಕರೋನಾ ಕಾರಣದದಿಂದ ಜೋಡಿಗಳ ಒಪ್ಪಿಗೆಯಂತೆ ಅವರವರ ಊರುಗಳಲ್ಲಿಯೇ ನೆರವೆರಿಸಲಾಯಿತು . ನೊಂದಾಯಿತ ಜೋಡಿಗೆ ತಾಳಿ ಸಹಿತ ಮಂಗಳ ಸೂತ್ರ ಸೀರೆ, ದೋತಿ, ಶಲ್ಯದ ಉಡುಗೊರೆಯ ಎಲ್ಲಾ ವೆಚ್ಚವನ್ನು ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನಾ ಟ್ರಸ್ಟ್ ವತಿಯಿಂದ ವಿವಾಹದ ಖರ್ಚು ನಿಭಾಯಿಸಲು ವಧು-ವರರಿಗೆ ತಲಾ 10ಸಾವಿರ ರೂ ವನ್ನು ಧರ್ಮಸ್ಥಳ ದಿಂದ ಒದಗಿಸಲಾಯಿತು.ಶ್ರೀ ಕ್ಷೇತ್ರದ ಪರಮ ಪೂಜ್ಯರಾದ ಡಾ.ವೀರೇಂದ್ರ ಹೆಗ್ಗಡೆ ಯವರು ಕಳುಹಿಸಿ ಕೊಟ್ಟಿರುವ ಉಡುಗೊರೆಯನ್ನು ವಧು-ವರರಿಗೆ ನೀಡಿ ಶುಭ ಹಾರೈಸಲಾಯಿತು.
ಆರ್ಥಿಕವಾಗಿ ಹಿಂದುಳಿದವರಿಗಾಗಿ ಹಾಗೂ ದುಂಧು ವೆಚ್ಚ ತಡೆಯುವು ಉದ್ದೇಶದಿಂದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು 1972 ರಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದರು .ಈ ತನಕ 12.262.ಜೋಡಿಗೆ ಮದುವೆಯಾಗಿದೆ.ಏ. 29 ರ ಗುರುವಾರದಂದು ರಾಜ್ಯಾದ್ಯಂತ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 121 ಜೋಡಿಗಳು ಸಪ್ತಪದಿ ತುಳಿದರು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು.ಹೆಗ್ಗಡೆಯವರಿಗೆ ವಿಡಿಯೋ ಸಂದೇಶ ಕಳುಹಿಸಿ ನೂತನ ದಂಪತಿಯನ್ನು ಆರ್ಶೀವಾದಿಸಿದರು. ಈ ಸಂಧರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಯೋಜನಾಧಿಕಾರಿ.ಮಂಜುನಾಥ್.ಗುಡೇಕೋಟೆ ವಲಯದ ಮೆಲ್ವೀಚಾರಕರಾದ.ಕೆ.ಕರಿಯಪ್ಪ.ಯೋಜನೆಯ ಕೃಷಿ ಆಧಿಕಾರಿ ಮಹಾಲಿಂಗಯ್ಯ.ಗುಡೇಕೋಟೆ ವಲಯದ ಕೃಷಿಯಂತ್ರಧಾರೆ ಇಲಾಖೆಯ ವ್ಯವಸ್ಥಾಪಕರಾರ ಮಂಜುನಾಥ್ .ವಲಯದ ಸೇವಾ ಪ್ರತಿನಿಧಿಗಳು.ಊರಿನ ಮುಖಂಡರು ಉಪಸ್ಥಿತರಿದ್ದರು.ಶುಭ ವಿವಾಹವು ಕೋವಿಡ್ ಇರುವುದರಿಂದ ಸಾಮೂಹಿಕ ವಿವಾಹಕ್ಕೆ ಅವಕಾಶವಿರದೆ ತಾಲೂಕಿನ ಸಿಡೇಗಲ್ ಗ್ರಾಮದ ಹೊರವಲದಲ್ಲಿರುವ ಶ್ರೀ ಗುರು ಬಸವೇಶ್ವರ ದೇವಸ್ಥಾನ.ಹಾಗೂ
ಕುದುರೆಡವೂ ಗ್ರಾಮದಲ್ಲಿ ವರನ ಸ್ವ- ಗೃಹದಲ್ಲಿ ವಿವಾಹ ನಡೆಯಿತು.