ಶ್ರೀಧರಗಡ್ಡೆಯಲ್ಲಿ ಉಚಿತವಾಗಿ ನೋಟ್ ಬುಕ್ ವಿತರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.17: ತಾಲೂಕಿನ ಶ್ರೀಧರಗಡ್ಡೆ ಗ್ರಾಮದ  ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು  ವಿಶ್ವಲಿಂಗಾಯತ ಮಹಾಜನ ಪರಿಷತ್ ನಿಂದ ವಿದ್ಯಾರ್ಥಿಗಳಿಗೆ  ಉಚಿತವಾಗಿ ನೋಟ್ ಬುಕ್ ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಶಂಕರಗೌಡ ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಬಳ್ಳಾರಿ ಜಿಲ್ಲೆಯ ಡಯಟ್ ನ  ಉಪನ್ಯಾಸಕ ಗಂಗಾಧರ್ ಅವರು ನೋಟು ಪುಸ್ತಕಗಳನ್ನು  ವಿತರಿಸಿ. ಅವುಗಳ‌ ಪ್ರಯೋಜನ ಪಡೆದು ಶಾಲೆಗೆ ಹಾಗೂ ಊರಿಗೆ ಕೀರ್ತಿ ಬೆಳಗಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಶ್ವ ಲಿಂಗಾಯತ ಮಹಾಜನ ಪರಿಷತ್ತಿನ  ಶ್ರೀನಿವಾಸ್ ಪಾಟೀಲ್ ಹಾಗೂ ದೊಡ್ಡ ಬಸವಣ್ಣಗೌಡ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನಮ್ಮ ಪರಿಷತ್ ಯಾವಾಗಲೂ ನಿಮ್ಮೊಂದಿಗೆ ಇದೆ ಎಂದು ನೋಟ್ ಪುಸ್ತಕಗಳನ್ನು ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ  ಜಂಬುನ ಹಾಗೂ ರಾಜಾಸಾಬ್. ಶಾಲೆಯ ಶಿಕ್ಷಕರಾದ ಗುಂಡಬಾಳ, ಕೆ ಎಸ್ ಕೃಷ್ಣರಾವ್, ನರಸಿಂಹ ಗೌಡ,  ಸಿ ಆರ್ ಪಿ ರವಿಚಂದ್ರ,  ಶಿಕ್ಷಕರಾದ ಸರಸ್ವತಿ ಹಾಗೂ ಸುಶೀಲ ಅವರು ಇದ್ದರು.