ಶ್ರೀದೊಡ್ಡಬಸವೇಶ್ವರಸ್ವಾಮಿಯ ರಥೋತ್ಸವದ ಶಾಂತಿಸಭೆ ಮಾ.28 ರ ರಥೋತ್ಸವದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ನಿಷೇಧ,

ಕುರುಗೋಡು .ಮಾ.26 ಮಹಾಮಾರಿ ಕೋರೋನಾ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾ.28 ರಂದು ಜರುಗುವ ಶ್ರೀದೊಡ್ಡಬಸವೇಶ್ವರಸ್ವಾಮಿಯ ರಥೋತ್ಸವದಲ್ಲಿ ಹೆಚ್ಚಾಗಿ ಸಾರ್ವಜನಿಕರು ಪಾಲ್ಗೊಳ್ಳುವಿಕೆಯನ್ನು ನಿಷೇದಿಸಲಾಗಿದೆ ಎಂದು ಕುರುಗೋಡು ಸಿಪಿಐ. ಚಂದನ್‍ಗೋಪಾಲ್ ಹೇಳಿದರು.
ಅವರು ಗುರುವಾರ ಪೋಲೀಸ್ ಠಾಣಾ ಆವರಣದಲ್ಲಿ ಮಾ.28ರಂದು ಜರುಗುವ ದೊಡ್ಡಬಸವೇಶ್ವರ ರಥೋತ್ಸವದ ನಿಮಿತ್ತ ಕರೆಯಲಾಗಿದ್ದ ಶಾಂತಿಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ಎಂದಿನಂತೆ ದಿನನಿತ್ಯದ ಪೂಜೆ, ದಾರ್ಮಿಕಕಾರ್ಯಗಳು ಮಾಡಬಹುದು ಮತ್ತು ದೇವರ ದರ್ಶನಕ್ಕೆ ಯಾವುದೇ ಸಮಸ್ಯೆಇಲ್ಲ ಎಂದು ಸ್ಪಷ್ಟಪಡಿಸಿದರು. ರಥೋತ್ಸವದಂದು ಸೋಮಲಾಪುರ, ಮುಷ್ಟಗಟ್ಟೆ, ಮತ್ತು ಕರೆಕೆರೆ ಗ್ರಾಮಸ್ಥರು, ಹಾಗು ಪಟ್ಟಣದ ನಾಗರಿಕರು ಶಾಂತಿ ಹಾಗು ಭಕ್ತಿಭಾವನೆಯಿಂದ ಶ್ರೀದೊಡ್ಡಬಸವೇಶ್ವರಸ್ವಾಮಿಯ ದರ್ಶನಪಡೆಯಬೇಕೆಂದರು. ಆದ್ದರಿಂದ ಎಲ್ಲರೂ ಪ್ರಸಕ್ತಸಾಲಿನ ದೊಡ್ಡಬಸವೇಶ್ವರ ಜಾತ್ರೆಯಲ್ಲಿ ಎಲ್ಲರೂ ಕೋರೋನಾ ಹರಡದಂತೆ ಮುಂಜಾಗ್ರತಕ್ರಮವಾಗಿ ಮಾಸ್ಕ, ಸಮಾಜಿಕ ಅಂತರಕಾಯ್ದುಕೊಂಡು ಕೊರೋನಾ ಹರಡದಂತೆ ಎಚ್ಚರವಹಿಸಿರಿ ಎಂದರು.
ದಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂಹೆಚ್. ಪ್ರಕಾಶರಾವ್ ಮಾತನಾಡಿ, ಸಂಪ್ರದಾಯದಂತೆ ದೇವಸ್ಥಾನದಲ್ಲಿ ಪೂಜೆ, ಕೈಂಕರ್ಯಗಳು ನಡೆಯುತ್ತಿವೆ. ಪೂಜೆಯ ಸಮಯದಲ್ಲಿ ಭಕ್ತರ ಪ್ರವೇಶಕ್ಕೆ ಯಾವುದೇ ಅಡ್ಡಿಇಲ್ಲ. ಕೋವಿಡ್ 2ನೇ ಅಲೆ ಇರುವುದರಿಂದ ಕೊರೋನಾ ನಿಯಮಗಳನ್ನು ಪಾಲಿಸಿ ಪೂಜೆ, ಧಾರ್ಮಿಕಕಾರ್ಯಗಳನ್ನು ನೆರವೇರಿಸಲಾಗುವುದು ಎಂದರು. ಪುರಸಭೆ ಮುಖ್ಯಾಧಿಕಾರಿ ಪುರುಶುರಾಮ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಚತೆ, ಕುಡಿಯುವ ನೀರು, ರಸ್ತೆಸರಿಪಡಿಸುವುದು, ಪಾರ್ಕಿಂಗ್ ಇತರೆ ಸೌಲಭ್ಯಗಳನ್ನು ಮಾಡಲಾಗುವುದು ಎಂದರು. ಗ್ರೇಡ್-2 ತಹಶೀಲ್ದಾರ ಮಲ್ಲೇಶಪ್ಪ, ಕುರುಗೋಡು ಪಿಎಸ್‍ಐ. ಮೌನೇಶರಾಥೋಡ್, ವೈದ್ಯಾಧಿಕಾರಿ ಮಂಜುನಾಥ, ಇತರೆ ಅದಿಕಾರಿಗಳು, ನಂತರ ಊರಿನ ಮುಖಂಡರು ಮತ್ತು ಸೋಮಲಾಪುರ, ಕರೆಕೆರೆ, ಮುಷ್ಟಗಟ್ಟೆ ಗ್ರಾಮದ ಮುಖಂಡರು ಕೆಲಸಲಹೆಗಳನ್ನು ನೀಡಿದರು.
ಕುರುಗೋಡು ನಾಗರಿಕರು ಹಾಗು ಮುಷ್ಟಗಟ್ಟೆ, ಸೋಮಲಾಪುರ, ಮತ್ತು ಕರೆಕೆರೆ ಗ್ರಾಮಸ್ಥರು, ಸಿಬ್ಬಂದಿವರ್ಗದವರು ಇದ್ದರು.ಇತರರು ತಮ್ಮ ಅನಿಸಿಕೆವ್ಯಕ್ತಪಡಿಸಿದರು.