ಶ್ರೀದೇವಿ ಹಲ್ಲೆ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ‌ ಪ್ರತಿಭಟನೆ

ಸಿಂಧನೂರು.ನ.07- ಕರ್ತವ್ಯ ‌ನಿರತ‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾಬಾಯಿ ಮೇಲೆ ಸ್ತ್ರೀ ಶಕ್ತಿ ಒಕ್ಕೂಟದ ಅದ್ಯಕ್ಷೆ ಶ್ರೀದೇವಿ ಹಲ್ಲೆ ಮಾಡಿದ್ದನ್ನು ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ‌ಬೃಹತ್ ಪ್ರತಿಭಟನೆ ಧರಣಿ ನಡೆಸಿದರು.
ಪ್ರವಾಸಿ ಮಂದಿರದಿಂದ ಹೊರಟ ನೂರಾರು ಜನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆ ಮೇರವಣಿಗೆ ನಡೆಸಿ ಶ್ರೀದೇವಿ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕೆಯನ್ನು ಬಂಧಿಸಬೇಕು ಹಲ್ಲೆಗೊಳಗಾದ ಅಧಿಕಾರಿ ಯೋಗಿತಾಬಾಯಿ ಗೆ ಸೂಕ್ತ ರಕ್ಷಣೆ ನೀಡಬೇಕೆಂದು ಧರಣಿ ನಿರತ ಪ್ರತಿಭಟನಾಕಾರರು ಆಗ್ರಹ ಪಡಿಸಿದರು.
ತಹಶೀಲ್ ಕಛೇರಿ ಮುಂದೆ ಪ್ರತಿಭಟನೆ ಧರಣಿ ನಿರತ ಕಾರ್ಯಕರ್ತೆಯರನ್ನು ಉದ್ದೇಶಿಸಿ ಸಂಘದ ಜಿಲ್ಲಾದ್ಯಕ್ಷರಾದ ಡಿ.ಎಚ್.ಕಂಬಳಿ‌ ಮಾತನಾಡಿ ಮಹಿಳಾ ‌ಅಧಿಕಾರಿ‌ ಮೇಲೆ ಹಲ್ಲೆ ಮಾಡಿ‌ ಬೆದರಿಕೆ ಹಾಕಿದ್ದನ್ನು ಅಂಗನವಾಡಿ ಕಾರ್ಯಕರ್ತರು ಮತ್ತು ‌ಸಹಾಯಕರ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ.ಜಿಲ್ಲಾಧಿಕಾರಿಗಳು ಎಸ್.ಪಿ ಗೆ ನಿರ್ದೇಶನ ನೀಡಿ ಸ್ವಯಂ ಪ್ರೇರಿತ ದೂರು‌ ದಾಖಲಿಸಿ ಕೊಂಡು ಶ್ರೀದೇವಿ ಯನ್ನು‌ ತಕ್ಷಣ ಬಂಧಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.ಶ್ರೀದೇವಿ ಯನ್ನು ಬಂಧಿಸದಿದ್ದರೆ ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಡಿ.ಎಚ್.ಕಂಬಳಿ‌ ಅಧಿಕಾರಿ ಗಳಿಗೆ ಎಚ್ಚರಿಕೆ ನೀಡಿ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ‌ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರರಾದ ಚಂದ್ರಶೇಖರ ಗೋರೆಬಾಳ, ಅಂಗನವಾಡಿ ಸಂಘಟನೆ ಮುಖಂಡರುಗಳಾದ ಶೋಭಾ,‌ಸುಲೋಚನಾ, ಆದಿ ಲಕ್ಷ್ಮೀ, ಗಿರಿಜಮ್ಮ, ಸುನೀತಾ ಗಾಂಧಿನಗರ, ರತ್ನಮ್ಮ , ಸಾವಿತ್ರಿ ,ಬಾಷುಮಿಯಾ, ಸುಧಾ, ತಿಪ್ಪಯ್ಯ ಶೆಟ್ಟಿ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.