
ಸಿಂಧನೂರು,ಏ.೧೬- ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಶ್ರೀದೇವಿ ಶ್ರೀನಿವಾಸ್ ಭೇಟಿ ನೀಡಿ ಆಶ್ರಮದಲ್ಲಿನ ಎಲ್ಲಾ ವೃದ್ಧರ ಯೋಗ ಕ್ಷೇಮವನ್ನು ವಿಚಾರಿಸಿ ಆಶ್ರಮದ ಸೇವೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಶ್ರೀದೇವಿ ಶ್ರೀನಿವಾಸ್ ಕಾರುಣ್ಯ ಆಶ್ರಮ ನಮ್ಮ ಸಿಂಧನೂರಿನ ಕರುಣಾಮಯಿ ಕುಟುಂಬವಾಗಿದೆ ನೊಂದ ಅನಾಥ ಜೀವಿಗಳಿಗೆ ಆಶ್ರಯ ನೀಡಿ ಹಿರಿಯರ ಸೇವೆ ಮಾಡುತ್ತಿರುವ ಕಾರುಣ್ಯ ಆಶ್ರಮಕ್ಕೆ ಸದಾವಕಾಲ ನಮ್ಮ ಸಹಾಯ ಸಹಕಾರವಿರುತ್ತದೆ.
ಹಿರಿಯ ಜೀವಿಗಳ ಸೇವೆ ಮಾಡುವುದರ ಮೂಲಕ ಹಿರಿಯ ನಾಗರೀಕರ ಸೇವಾ ತಿಳುವಳಿಕೆ ಅಭಿಯಾನದ ಮೂಲಕ ಜನರಲ್ಲಿ ಅರಿವು ಮೂಡಿಸಿ ತಮ್ಮ ತಂದೆ ತಾಯಿಗಳನ್ನು ಪ್ರೀತಿ ಗೌರವದಿಂದ ಕಾಣಬೇಕು ಎನ್ನುವ ಸಂದೇಶ ಸಾರುತ್ತಿರುವ ಈ ಆಶ್ರಮ ಸಮಸ್ತ ನಾಡಿನ ಜನರ ಹೃದಯದಲ್ಲಿದೆ ಈ ಆಶ್ರಮಕ್ಕೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಸದಾವಕಾಲ ಬೆನ್ನೆಲುಬಾಗಿರುತ್ತದೆ. ಮತ್ತು ವಿವಿಧ ಸಭೆ ಸಮಾರಂಭಗಳಲ್ಲಿ ಉಳಿದಿರುವಂತಹ ಆಹಾರವನ್ನು ವ್ಯರ್ಥ ಮಾಡದೆ ಹಸಿವಿನ ಅವಶ್ಯಕತೆ ಇರುವ ಕುಟುಂಬಗಳಿಗೆ ತಲುಪಿಸುವ ಮಹಾನ್ ಕಾರ್ಯ ಮಾಡುತ್ತಿರುವುದು ನಮ್ಮ ಸಿಂಧನೂರಿಗೆ ದೇವರು ಕೊಟ್ಟಿರುವ ಸಂಸ್ಥೆಯಾಗಿದೆ ಎಂದು ಹೇಳಿದರು.
ಕಾರುಣ್ಯ ಆಶ್ರಮದ ಸೇವೆಯನ್ನು ಅರಿತು ಅದೆಷ್ಟು ಸಂಸ್ಥೆಗಳು ಪ್ರಾರಂಭವಾಗಿ ಹಲವಾರು ಅನಾಥರ ಬಾಳಿಗೆ ಬೆಳಕಾಗಿದೆ ಇಂತಹ ಸೇವೆಗೆ ನನ್ನ ಹಾಗೂ ಪಕ್ಷದ ಸಹಾಯ ಸಹಕಾರ ನಿರಂತರವಾಗಿರುತ್ತದೆ ಎಂದು ಮಾತನಾಡಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಆಶ್ರಮಕ್ಕೆ ಅವಶ್ಯಕತೆ ಇರುವ ಸಹಾಯವನ್ನು ಮುಂದಿನ ದಿನಮಾನಗಳಲ್ಲಿ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಬಸಮ್ಮ ಉಪಸ್ಥಿತರಿದ್ದರು. ನಂತರ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಇಂದುಮತಿ ಏಕನಾಥ. ಶರಣಮ್ಮ ಮರಿಯಪ್ಪ ಕರಿಯಪ್ಪ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.