ಶ್ರೀದೇವಿಯ ಭಂಡಾರ ಕಾರ್ಯಕ್ರಮ

ಹುಬ್ಬಳ್ಳಿ, ಜು23: ವಿದ್ಯಾನಗರದ ಜವಳಿ ಗಾರ್ಡನ್‍ನಲ್ಲಿನ ಜಾಗ್ರತ ದೇವಿ ಶ್ರೀ ಅಂಬಾಭವಾನಿ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆಷಾಡ ಮಾಸದ ಶುಕ್ರವಾರ ರಂದು ಶ್ರೀದೇವಿಯ ಭಂಡಾರ ಕಾರ್ಯಕ್ರಮ ನಡೆಯಿತು.
ಧುರೀಣರಾದ ನಾಗರಾಜ ಪಟ್ಟಣ ಇವರ ನೇತೃತ್ವದಲ್ಲಿ ಬೆಳಿಗ್ಗೆ ದೇವಿಗೆ ಅಭಿಷೇಕ ಮತ್ತು ವಿಶೇಷ ಅಲಂಕಾರ ನಡೆಯಿತು. ಶ್ರೀ ಸದ್ಗುರು ಚಿತ್ತ ಪ್ರಕಾಶಮಾನವಾದ ಸರಸ್ವತಿ ಸ್ವಾಮೀಜಿಯವರ ಪಾದಪೂಜೆ ಮತ್ತು ಗುರು ಮಾತಾ ವಿಜಯಾ ಬದ್ದಿ ಅವರಿಗೆ ಗುರುಪೂಜೆಯನ್ನು ನಾಗರಾಜ ಪಟ್ಟಣ ದಂಪತಿಗಳು ನೆರವೇರಿಸಿದರು.
ಡೊಳ್ಳು ಮೂಲಕ ನಗರ ಪ್ರದಕ್ಷಿಣೆ ನಂತರ ಮಹಾಮಂಗಳಾರತಿ ಮುತ್ತೈದೆಯರಿಗೆ ನೈವೇದ್ಯ, ಸಾರ್ವಜನಿಕರಿಗೆ ಅನ್ನಸಂತರ್ಪಣೆ, ಸಾಯಂಕಾಲ ಬುತ್ತಿ ಪೂಜೆ ನಡೆಯಿತು.
ಕಾರ್ಯಕ್ರಮದಲ್ಲಿ ನಾಗೇಶ್ ಕಲಬುರ್ಗಿ ನೀಲಕಂಠ ಸಾ ಜಡಿ, ಎಸ್ ಎಸ್ ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಪಿ.ಆರ್. ಹಬೀಬ, ಎಸ್ ಎಸ್ ಕೆ ಮೈತ್ರಿ ಮಹಿಳಾ ಅಸೋಸಿಯನ್ ಅಧ್ಯಕ್ಷರಾದ ಶ್ರೀಮತಿ ರತ್ನಮಾಲಾ ಬದಿ,್ದ ಮಾಜಿ ಮಹಾಪೌರ ಶ್ರೀಮತಿ ಸರಳಾ ಭಾಂಡಗೆ ಮತ್ತು ಪದಾಧಿಕಾರಿಗಳು, ಎಸ್ ಎಸ್ ಕೆ ಮಿತ್ರಮಂಡಳಿ ವಿದ್ಯಾನಗರ, ಅಧ್ಯಕ್ಷರಾದ ಕ್ರಿಷ್ಣಾ ಹಬೀಬ ಮತ್ತು ಪ್ರಕಾಶ್ ಚವಾಣ್ ಸುನಿಲ್ ಜಿತೂರಿ ಮತ್ತು ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.