ಶ್ರೀಜಯತೀರ್ಥ ಆರಾಧನಾ ಮಹೋತ್ಸವ

ರಾಯಚೂರು.ಜು.೧೮- ಶ್ರೀ ಜಯತೀರ್ಥ ಆರಾಧನಾ ಮಹೋತ್ಸವ ಇಂದು ಅದ್ಧೂರಿಯಾಗಿ ನಿರ್ವಹಿಸಲಾಯಿತು. ಶ್ರೀಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಜಯತೀರ್ಥ ಅಷ್ಟೋತ್ತರ ಪಾರಾಯಣವನ್ನು ಶ್ರೀಮಠದಲ್ಲಿ ಮಾಡಲಾಯಿತು. ನಂತರ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಜಯತೀರ್ಥರ ರಥೋತ್ಸವಕ್ಕೆ ಪುಷ್ಪವೃಷ್ಟಿ ಮಂಗಳಾರತಿ ಮೂಲಕ ಚಾಲನೆ ನೀಡಿದರು. ಅನೇಕ ಜನರ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀ ಜಯತೀರ್ಥ ಮಹಿಮೆ ಮತ್ತು ಅವರ ಮೂಲ ಬೃಂದಾವನ ಕುರಿತು ಅನುಗ್ರಹ ಸಂದೇಶ ನೀಡಿ, ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಅವರು ಆಶೀವರ್ದಿಸಿದರು.