ಶ್ರೀಜಗನ್ನಾಥ ದಾಸರ ಜೀವನ ಚರಿತ್ರೆ ಆಧಾರಿತ ಚಿತ್ರದ ಚಿತ್ರೀಕರಣಕ್ಕೆ ಚಾಲನೆ

ಗಂಗಾವತಿ ಮಾ.26: ಸ್ಥಳೀಯ ಹಿರೇಜಂತಕಲನ ಶ್ರೀ ಪ್ರಸನ್ನ ಪ‌ಂಪಾವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಶ್ರೀ ಜಗನ್ನಾಥ ದಾಸರ ಜೀವನ ಚರಿತ್ರೆ ಆಧಾರಿತ ಚಲನಚಿತ್ರದ ಚಿತ್ರೀಕರಣಕ್ಕೆ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ್ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ದಾಸ ಸಾಹಿತ್ಯಕ್ಕೆ ಶ್ರೀಜಗನ್ನಾಥರ ಕೊಡುಗೆ ಅಪಾರ. ಇಂತಹ ದಾಸರ ಚರಿತ್ರೆ,ಇತಿಹಾಸ ಚಲನಚಿತ್ರದ ಮೂಲಕ ಜನರಿಗೆ ತಳಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಈ ವೇಳೆ ಚಿತ್ರದ ನಿರ್ದೇಶಕ ಮಧುಸೂದನ್ ಹವಾಲ್ದಾರ್,ನಗರಸಭೆ ಮಾಜಿ ಅಧ್ಯಕ್ಷ ರಾಘವೇಂದ್ರ ಶ್ರೇಷ್ಠಿ,ಈ.ಪರಮೇಶ, ಚಂದ್ರಪ್ಪ ಉಪ್ಪಾರ, ಕಲಾವಿದರಾದ ನಾಗರಾಜ್ ಇಂಗಳಿಗೆ, ನಾಗರಾಜ್ ಉಪ್ಪಾರ ಹಾಗೂ ಕಲಾವಿದರು ಉಪಸ್ಥಿತರಿದ್ದರು ‌