ಶ್ರೀಚಂದ ಹಜರತ ಸೈಯದ್ ಬಾಷಾ ಮುತ್ತ್ಯಾನವರ ಜಾತ್ರಾ ಮಹೋತ್ಸವ

ಕಲಬುರಗಿ: ಎ.7:ಪ್ರತಿ ವರ್ಷದಂತೆ ಈ ವರ್ಷವೂ ಕಮಲಾಪೂರ ತಾಲೂಕಿನ ಶ್ರೀಚಂದ ಗ್ರಾಮದ ಹಜರತ್ ಸೈಯದ್ ಬಾಷಾ ಮುತ್ತ್ಯಾನವರ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹಜರತ್ ಸೈಯದ್ ಬಾಷಾ ಮುತ್ತ್ಯಾನವರ ಕಮಿಟಿಯ ಅಧ್ಯಕ್ಷರಾದ ರಾಜಕುಮಾರ ಮರಗುತ್ತಿ ಹಾಗೂ ಸಮಸ್ತ ಸದ್ಭಕ್ತ ಮಂಡಳಿ
ಸದಸ್ಯರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಕಮಲಾಪೂರ ತಾಲೂಕಿನ ಶ್ರೀಚಂದ ಗ್ರಾಮದಲ್ಲಿ ಶ್ರೀ ಹಜರತ್ ಸೈಯದ್ ಬಾಷಾ ಮುತ್ತ್ಯಾನವರ ಜಾತ್ರಾ ಮಹೋತ್ಸವ ಇದೇ ಶುಕ್ರವಾರ ದಿನಾಂಕ 7 ರಿಂದ 9 ರವರೆಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಬಹು ವಿಜೃಂಬಣೆಯಿಂದ ನೇರವೇರಲಿದೆ.ಈ ಜಾತ್ರಾ ಮಹೋತ್ಸವದ ವಿಶೇಷತೆ ಎಂದರೆ ಹಿಂದೂ ಮುಸ್ಲಿಂ ಭೇದ ಭಾವ ವಿಲ್ಲದೆ ಸರ್ವ ಧರ್ಮದ ಎಲ್ಲಾ ಜನಾಂಗದ ಜನರು ಒಗ್ಗೂಡಿ ಹಜರತ್ ಸೈಯದ್ ಬಾಷಾ ಸೇವೆ ಮಾಡುತ್ತಾ ಸೌಹಾರ್ದತೆಯ ದೀಪ ಹಚ್ಚುತ ಶ್ರಿ ಹಜರತ್ ಸೈಯದ್ ಬಾಷಾ ದೇವರ ಆರ್ಶೀವಾದ ಪಡೆದು ಪುನೀತರಾಗುತ್ತ ಜಾತಿ ಭೇದ ಇಲ್ಲ ಎನ್ನುವ ಸಂದೇಶವನ್ನು ಈ ನಮ್ಮ ಜಾತ್ರೆಯ ಮೂಲಕ ಇಡೀ ದೇಶಕ್ಕೆ ಪ್ರತಿ ವರ್ಷವೂ ಇದೇ ರೀತಿ ನಡೆಯುತ್ತಾ ಬಂದಿರುತ್ತದೆ.

ಏ. 7 ರಂದು ಸಾಯಂಕಾಲ 7 ಗಂಟೆಗೆ ಲಕ್ಷ್ಮೀ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೇರವೆರುವುದು.ಅದೇ ದಿವಸ ರಾತ್ರಿ 8 ಗಂಟೆಗೆ ಲಕ್ಷ್ಮೀ ದೇವಸ್ಥಾನದಿಂದ ಶ್ರೀ ಹಜರತ್ ಸೈಯದ್ ಬಾಷಾ ದರ್ಗಾದವರೆಗೂ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಸೇರಿಕೊಂಡು ಡೊಳ್ಳು,ಬಾಜಿ,ಭಜಂತ್ರಿ,ಮತ್ತು ಸೌಂಡ ಮೆರವಣಿಗೆ ಮೂಲಕ ಗಂಧ ದರ್ಗಾಕ್ಕೆ ತಲುಪುವುದು ಎಂದು ಅವರು ತಿಳಿಸಿದ್ದಾರೆ.ಏ 08 ರಂದು ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯ ವರೆಗೆ ಗೀಗೀ ಪದಗಳು ಕಾರ್ಯಕ್ರಮ ಜರುಗುವುದು.ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಮಾಲಿಮಾಟೀಲ ಮನೆಯಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಶ್ರೀ ಹಜರತ್ ಸೈಯದ್ ಬಾಷಾ ದರ್ಗಾದವರೆಗೂ ಸಾಲು ದೀಪಗಳ ಮೆರವಣಿಗೆ ಹಾಗೂ ಮದ್ದು ಸುಡುವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗುವುದು. ದಿನಾಂಕ 9 ರಂದು , ಮಧ್ಯಾಹ್ನ 3.30 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ಜಂಗೀ ಪೈಲ್ವಾನರರ ಕುಸ್ತಿಗಳು ನಡೆಯುವುದು ಎಂದು ಅವರು ತಿಳಿಸಿದ್ದಾರೆ.