ಶ್ರೀಚಂದದಲ್ಲಿ ನಾಟಕ,ಜನಪದ ಉತ್ಸವ

ಕಲಬುರಗಿ ಏ 3: ಚಿತ್ತಾಪುರದ ನಾಗಾಯಿ ಯಲ್ಲಮ್ಮದೇವಿ ಸೇವಾ ಸಾಂಸ್ಕøತಿಕ ನಾಟ್ಯ ಕಲಾ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಚನ್ನಪ್ಪ ಚನ್ನಗೌಡ ಅರ್ಥಾತ್ ರೈತನ ಕೊಲೆ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಮತ್ತು ಜಾನಪದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ನಾಟಕ ಪ್ರದರ್ಶನವನ್ನು ವೀರೇಂದ್ರ ಮತ್ತು ಚಕ್ರಂದರಾವ್ ಉದ್ಘಾಟಿಸಿದರು. ಶರಣಬಸಪ್ಪ ಕಟ್ಟಿಮನಿ ತಂಡದವರು ನಾಟಕ ಪ್ರದರ್ಶನ ನೀಡಿದರು.ಗ್ರಾಮದ ಅನೇಕ ಮುಖಂಡರು ಉಪಸ್ಥಿತರಿದ್ದರು.ಗ್ರಾಮಸ್ಥರು ನಾಟಕಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ನಾಗಾಯಿ ಯಲ್ಲಮ್ಮದೇವಿ ಸೇವಾ ಸಾಂಸ್ಕøತಿಕ ನಾಟ್ಯ ಕಲಾ ಸಂಘದ ಅಧ್ಯಕ್ಷ ಭೀಮೇಶ ಕಲಬುರಗಿ ತಿಳಿಸಿದ್ದಾರೆ.