ಶ್ರೀಗುರು ಶಾಂತೇಶ್ವರ ಹಿರೇಮಠದ ಜಾತ್ರಾ ಮಹೋತ್ಸವ ಆರಂಭ

ಆಳಂದ: ಮಾ.2:ಮಾದನಹಿಪ್ಪರಗಾ ಗ್ರಾಮದ ಶ್ರೀಗುರು ಶಾಂತೇಶ್ವರ ಹಿರೇಮಠದ ಜಾತ್ರಾ ಮಹೋತ್ಸª ಹಾಗೂ ಜಗದ್ಗುರು ರೇಣುಕಾಚಾರ್ಯರ ಯುಗಶತಮಾನೊತ್ಸವ ಕಾರ್ಯಕ್ರಮ ಮಾರ್ಚ 1 ರಿಂದ 11 ರವರೆಗೆ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಪ್ರತಿ ದಿನ ಸಂಜೆ ಕಡಕೋಳ ಮಡಿವಾಳಪ್ಪನವರ ಮಹಾಪುರಾಣ 1008 ಮುತೈದೆಯರಿಗೆ ಉಡಿ ತುಂಬುವುದು ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷಾ ಪಟ್ಟಾಧ್ಯಕ್ಷರ ಕುಂಬೋತ್ಸವ ಲಿಂ. ಶಿವಲಿಂಗ ಮಹಾಶಿವಯೋಗಿಗಳ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ತೂಗು ಉಯ್ಯಾಲೆ ಸಾಮೂಹಿಕ ಜಪ ಅನುಷ್ಠಾನ 11 ರಂದು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಗಣ್ಯರಿಗೆ ಸತ್ಕಾರ ಸಮಾರಂಭ ನಡೆಯಲಿದೆ. ಈ ಒಂದು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸರ್ವ ಭಕ್ತಾಧಿಗಳು ಪಾಲ್ಗೊಳ್ಳಬೇಕೆಂದು ಶಾಂತೇಶ್ವರ ಹಿರೇಮಠದ ಪೀಠಾಧಿಪತಿಗಳಾದ ಶ್ರೀ ಶಾಂತವೀರ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.