ಶ್ರೀಗುರು ರಾಘವೇಂದ್ರ ಸಹಕಾರಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಮಾನವಿ,ಜ.೦೮- ಪಟ್ಟಣದ ಶ್ರೀಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ನಾನು ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ಡಾ. ವೀರಣ್ಣ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನನ್ನ ರಾಜೀನಾಮೆ ಸ್ವೀಕರಿಸುವ ಮೊದಲು ನಾನು ರಾಜ್ಯ ಮತ್ತು ವಿಭಾಗೀಯ ಹಾಗೂ ರಾಯಚೂರು ಜಿಲ್ಲಾ ಸಹಕಾರಿ ಸಂಘದ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ, ಇನ್ನೂ ಮುಂದೆ ನನಗೂ ಹಾಗೂ ಶ್ರೀ ರಾಘವೇಂದ್ರ ಸಹಕಾರಿ ಸಂಘಕ್ಕೂ ವ್ಯಾವಹಾರಿಕವಾಗಿ ಯಾವುದೇ ಸಂಬಂಧ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.