ಶ್ರೀಗಳ ದಾರಿಯಲ್ಲಿ ಸಾಗೋಣ: ಹೇಮಂತ್ ಕುಮಾರ್

ಮೈಸೂರು: ಜ.22:- ಶಿವಕುಮಾರಸ್ವಾಮೀಜಿ ಸೂರ್ಯನಂತೆ ಎಲ್ಲರ ಮನೆ, ಮನಸ್ಸು ಬೆಳಗುವ ಮಹಾನ್ ಚೇತನ. ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದಾರೆ, ಮುಂದೆಯೂ ಇರುತ್ತಾರೆ ಶಿವಕುಮಾರಸ್ವಾಮೀಜಿ ಅವರನ್ನು ಸ್ಮರಣೆ ಮಾಡುವುದರೊಂದಿಗೆ ಅವರ ದಾರಿಯಲ್ಲಿ ನಾವು ಸಾಗಬೇಕು, ಅವರ ದಾರಿಯಲ್ಲಿ ಸಾಗಿದರೆ ಮಾತ್ರ ಅವರ ಸ್ಮರಣೋತ್ಸವ ಸಾರ್ಥಕವಾಗುತ್ತದೆ' ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಹೇಳಿದರು. ಪ್ರಜ್ಞಾವಂತ ನಾಗರಿಕ ವೇದಿಕೆ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಶ್ರೀ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ 3 ನೇ ವರ್ಷದ ಪುಣ್ಯಸ್ಮರಣೆ ಯನ್ನು ಕುವೆಂಪು ನಗರದಲ್ಲಿರುವ ಶ್ರೀ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ವೃತ್ತದಲ್ಲಿ ಶ್ರೀಗಳ ನುಡಿ ನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಶ್ರೀಗಳ ದಾರಿಯಲ್ಲಿ ಸಾಗೋಣ ಶಿವಕುಮಾರಸ್ವಾಮೀಜಿ ಸೂರ್ಯನಂತೆ ಎಲ್ಲರ ಮನೆ, ಮನಸ್ಸು ಬೆಳಗುವ ಮಹಾನ್ ಚೇತನ. ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದಾರೆ, ಮುಂದೆಯೂ ಇರುತ್ತಾರೆಶಿವಕುಮಾರಸ್ವಾಮೀಜಿ ಅವರನ್ನು ಸ್ಮರಣೆ ಮಾಡುವುದರೊಂದಿಗೆ ಅವರ ದಾರಿ ಯಲ್ಲಿ ನಾವು ಸಾಗಬೇಕು, ಅವರ ದಾರಿಯಲ್ಲಿ ಸಾಗಿದರೆ ಮಾತ್ರ ಅವರ ಸ್ಮರಣೋತ್ಸವ ಸಾರ್ಥಕವಾಗುತ್ತದೆ’ ಎಂದು ಹೇಳಿದರು.
ತ್ರಿವಿಧ ದಾಸೋಹಿಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ. ಇಷ್ಟಲಿಂಗ ಪೂಜೆಯನ್ನು ಜಗತ್ತಿಗೆ ತೋರಿಸಿಕೊಟ್ಟವರು ಶಿವಕುಮಾರ ಸ್ವಾಮೀಜಿ. ಇಷ್ಟಲಿಂಗ ಪೂಜೆಯನ್ನು ಇಷ್ಟಪಟ್ಟು ಮಾಡುತ್ತಲೇ ತಮ್ಮ ಶಕ್ತಿ ಪಡೆದುಕೊಳ್ಳುತ್ತಿದ್ದರು’ ಎಂದರು.
ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಬಿ ಎಂ ರಘು ಮಾತನಾಡಿ `ಶಿವಕುಮಾರ ಸ್ವಾಮೀಜಿಯ ಸ್ಮರಣೆಯೇ ನಮಗೆ ಬೆಳಕು. ಅವರು ಕರಗದೇ ಇರುವ ಮುತ್ತು. ತಮ್ಮ ಜೀವನವೇ ಸಂದೇಶ ಎಂಬಂತೆ ಬದುಕಿದ ಶ್ರೀಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ’ ಎಂದರು.
ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿತುಮಕೂರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು , ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಮಾಡಿದ ಕಾರ್ಯ ದೇಶಕ್ಕೆ ಮಾದರಿಯಾಗಿದೆ ಭಾರತ ರತ್ನ ನೀಡಿ ಗೌರವಿಸಿದರೆ ಪ್ರಶಸ್ತಿಗೆ ಗೌರವ ನೀಡಿದಂತಾಗುತ್ತದೆ .ಜಾತಿ .ಮತ. ಪಂಥ .ಭಾಷೆ .ಧರ್ಮ ಎನ್ನದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ನಾಡನ್ನು ಶ್ರೀಮಂತಗೊಳಿಸಿದ ಶ್ರೀಗಳಿಗೆ ತಕ್ಷಣವೇ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು, ಮತ್ತೊಬ್ಬ ಬಸವಣ್ಣ
ಕಾಯಕಯೋಗಿ, ಸಾಮಾಜಿಕ ನ್ಯಾಯ ಹರಿಕಾರ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ನಮ್ಮ ಮಠದ ಕಾಯಕದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಕ್ಷೇತ್ರ ಸರ್ವತೋಮುಖವಾಗಿ ಬೆಳೆದು ಬಡವರಿಗೆ, ಅಶಕ್ತರಿಗೆ ಅನ್ನ, ವಿದ್ಯೆ ನೀಡಿ ಆಸರೆಯಾಗಲಿ ಎಂದು ಹರಿಸುತ್ತಿದ್ದರು. ಸಮಸ್ತ ಮಠಮಾನ್ಯಗಳಿಗೆ ಹಾಗೂ ಇಡೀ ಗುರುವೃಂದಕ್ಕೆ ತಿಲಕಪ್ರಾಯರಾಗಿದ್ದ ಪೂಜ್ಯರು ನಮ್ಮೆಲ್ಲರಿಗೂ ಮಾರ್ಗಜ್ಯೋತಿಯಾಗಿದ್ದರು.
ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಬಿ ಎಂ ರಘು, ನಗರಪಾಲಿಕ ನಾಮನಿರ್ದೇಶಕರಾದ ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ರಾಕೇಶ್, ಎಸ್ ಎನ್ ರಾಜೇಶ್, ಲಿಂಗರಾಜು, ಅಭಿಷೇಕ್ ಗೌಡ, ಅಪೂರ್ವ ಸುರೇಶ್, ದುರ್ಗಾ ಪ್ರಸಾದ್, ಹಾಗೂ ಇನ್ನಿತರರು ಭಾಗವಹಿಸಿದರು