ಶ್ರೀಗಳ ಗೌರವಾರ್ಥ ಇಂಡಿ ಬಂದ

ಇಂಡಿ:ಜ.4:ನಡೆದಾಡುವ ದೇವರು ಪರಮಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳು ಅಮರರಾದ ನಿಮಿತ್ಯ ಅವರ ಗೌರವಾರ್ಥ ಇಂಡಿ ಬಂದಾಗಿತ್ತು.
ಕೃಷಿ ಮಾರುಕಟ್ಟೆ, ಬಂಗಾರ ಅಂಗಡಿಗಳು ಸೇರಿದಂತೆ ಕೆಲವೊಂದು ಅವಶ್ಯಕ ಹೊರತು ಪಡಿಸಿ ಬಹುತೇಕ ಪಟ್ಟಣದಲ್ಲಿ ಮೌನ ವಾತಾವರಣವಿತ್ತು.
ಸರಕಾರಿ ಕಚೇರಿಗಳು,ಶಾಲಾ ಕಾಲೇಜುಗಳು ಬಂದ ನಿಮಿತ್ಯ ಪಟ್ಟಣದಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ಹಲವಾರು ಕಡೆ ಶೃದ್ಧಾಂಜಲಿ ಕಾರ್ಯಕ್ರಮಗಳು ನಡೆದುದಲ್ಲಲ್ಲಿ ಅಲ್ಲಲ್ಲಿ ಪ್ರಸಾದ ವಿತರಣೆ ಕೂಡ ನಡೆಯಿತು.
ಮುಸ್ಲಿಂ ಬಾಂಧವರು ಸೇರಿದಂತೆ ಅನೇಕರು ಯಾವದೇ ಜಾತಿ,ಮತ,ಪಂಥವೆನ್ನದೆ ಬಂದಗೆ ಸಹಕರಿಸಿದರು.
ಗ್ರಾಮೀಣ ಭಾಗದಲ್ಲೂ ವ್ಯಾಪಾರಸ್ಥರು ಅಂಗಡಿಗಳನ್ನು ಬಂದು ಮಾಡಿ ಗೌರವ ಸಲ್ಲಿಸಿದ್ದಾರೆ.