
ಸಿರವಾರ.ಮಾ೪- ಕಳೆದ ವರ್ಷ ದಸಾರ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ ಪುರಾಣ ಕಾರ್ಯಕ್ರಮದಲ್ಲಿ ನಿಲೋಗಲ್ ಮಠದ ಉಭಯ ಶ್ರೀಗಳು ಮಹಾದ್ವಾರ ನಿರ್ಮಾಣಕ್ಕೆ ಮನವಿ ಮಾಡಿದರು. ಅದರಂತೆ ೫ ಲಕ್ಷ ವೆಚ್ಚದಲ್ಲಿ ಶ್ರೀಮಠದ ಮಹಾದ್ವಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ತಾಲೂಕಿನ ನಿಲೋಗಲ್ ಕ್ಯಾಂಪಿನಲ್ಲಿ ಇಂದು ಬೆಳಗ್ಗೆ ನಿಲೋಗಲ್ ಬೃಹನ್ಮಠದ ಮಹಾದ್ವಾರ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಠದ ಶ್ರೀಗಳ ಆಶಿರ್ವಾದ ನನ್ನ ಹಾಗೂ ಪಕ್ಷದ ಮೇಲೆ ಇದೆ. ಪುರಾಣ ಕಾರ್ಯಕ್ರಮಕ್ಕೆ ಆಗಮಿಸಿದಾಗ ಶ್ರೀಗಳು ಮಹಾದ್ವಾರ ನಿರ್ಮಿಸುವಂತೆ ಬೇಡಿಕೆ ಇಟ್ಟಿದರು. ಮಠವು ನಮ್ಮ ಕ್ಷೇತ್ರಕ್ಕೆ ಬರಲ ಎಂದಿದೆ ಕ್ಯಾಂಪ್ ನಲ್ಲಿ ನಿರ್ಮಿಸುವಂತೆ ಹೇಳಿದರು ಅದರಂತೆ ೫ ಲಕ್ಷ ಅನುದಾನ ನೀಡಿರುವೆ, ಮುಂದೆ ಸಾದ್ಯವಾದರೆ ಇನೂ ಹೆಚ್ಚಿನ ಅನುದಾನ ನೀಡುವೆ. ಕ್ಯಾಂಪಿನ ಚರ್ಚ್ ಗೆ ೫ ಲಕ್ಷ, ೧೦ ಲಕ್ಷ ಸಿಸಿ ರಸ್ತೆ, ೧೦ ಲಕ್ಷದ ಮೆಟ್ಲಿಂಗ್ ಕಾಮಗಾರಿ ಮಾಡಿರುವೆ.
೪.೫ ವರ್ಷದಲ್ಲಿ ರೈತರಿಗೆ ಎರಡು ಬೆಳೆಗೆ ನೀರು ನೀಡಿರುವೆ. ಈ ಬಾರಿಯೂ ಸಹ ನೀರು ಬರುತ್ತವೆ ರೈತರು ಆತಂಕ ಪಡುವ ಅಗತ್ಯವಿಲ. ರಾಮಜಂನೆಯ್ಯ ದೇವಸ್ಥಾನಕ್ಕೆ ಅನುದಾನ ಕೇಳಿದ್ದಾರೆ ನೀಡುವೆ ಎಂದರು. ಈ ಸಂದರ್ಭದಲ್ಲಿ ನಿಲೋಗಲ್ ಮಠದ ಹಿರಿಯ ಶ್ರೀಗಳಾದ ಷ.ಬ್ರ. ಡಾ.ಪಂಚಾಕ್ಷರಿ ಶಿವಾಚಾರ್ಯರು, ನವಲಕಲ್ ಬೃಹನ್ಮಠದ ಅಭಿನವಸೋಮನಾಥ ಶಿವಾಚಾರ್ಯ, ಮಾನ್ವಿ ಕಲ್ಮಠದ ಡಾ. ವೀರುಪಾಕ್ಷ ಪಂಡಿತಾರಾದ್ಯರು, ಬಸಲಯೋಗಿ ರೇಣುಕಾಶಾಂತಮಲ್ಲ ಶಿವಾಚಾರ್ಯರು, ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು, ಜೆಡಿಎಸ್ ತಾಲೂಕ ಅದ್ಯಕ್ಷ ಮಲ್ಲಿಕಾರ್ಜುನ ಪಾಟೋಲ್ ಬಲ್ಲಟಗಿ, ಜಿ.ಲೋಕರೇಡ್ಡಿ, ಬಾಬುಗೌಡ, ಜಂಬಣ್ಣ ನಿಲೋಗಲ್, ರಾಜಾ ಆದರ್ಶನಾಯಕ ಶಾಂತಮೂರ್ತಿ, ಚನ್ನಯ್ಯ ತಾತ ಶಾಖಾಪೂರು, ನಿಂಗನಗೌಡ ಗಣೇಕಲ್,ಮಲ್ಲಪ ಗಣೇಕಲ್, ಮಲ್ಲಿಕಾರ್ಜುನ ಪಾಟೀಲ್ ಗುತ್ತೆದಾರ ಪಂಪಾಪತಿ ಅತ್ತನೂರು, ಜೆಮ್ಸರ್ ಅಲಿ ಸೇರಿದಂತೆ ಇನ್ನಿತರರು ಇದ್ದರು