ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ: ಪಟ್ಟಣಶೆಟ್ಟಿ

ಬಾದಾಮಿ, ನ25: ಶಿವಯೋಗಮಂದಿರ, ಹಾಲಕೆರೆ ಲಿಂಗೈಕ್ಯ ಸಂಗನಬಸವ ಮಹಾಸ್ವಾಮಿಗಳು ಶತಮಾನೋತ್ಸವ ಕಾರ್ಯಕ್ರಮ ಮಾಡುವ ವೇಳೆ ಅವರು ತೋರಿದ ಧೈರ್ಯದ ಮಾತು ನೆನೆದು ಬಾದಾಮಿ ಮಾಜಿ ಶಾಸಕ ಎಂ. ಕೆ. ಪಟ್ಟಣಶೆಟ್ಟಿ ಕಣ್ಣೀರಿಟ್ಟು, ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣವೆಂದು ಹೇಳಿದರು.
ಅವರು ಪಟ್ಟಣದ ಅಕ್ಕಮಹಾದೇವಿ ಅನುಭಾವ ಮಂಟಪದಲ್ಲಿ ನಡೆದ ಲಿಂಗೈಕ್ಯ ಸಂಗನಬಸವ ಶ್ರೀಗಳಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಭಕ್ತರ ಸಂತಸಕ್ಕೆ, ಶಿವಯೋಗಮಂದಿರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಅವರು ನಮ್ಮನ್ನು ಬಿಟ್ಟು ಅಗಲಿಲ್ಲ.ಅವರು ನಮ್ಮ ಮಧ್ಯೆ ಇದ್ದಾರೆ. ಹೊರಗಡೆ ಹೋಗಿದ್ದಾರೆ. ವಾಪಸ್ ಬರುತ್ತಾರೆ ಎನ್ನುವ ಭಾವವಿದೆ. ಕುಮಾರೇಶ್ವರರನ್ನು ನೆನೆದು ಅವರು ಕಾರ್ಯ ಮಾಡುತ್ತಿದ್ದರು.ಈಚೆಗೆ ಹಾಲಕೆರೆಯಲ್ಲಿ ಕಾರ್ಯಕ್ರಮ ಮಾಡಿದ್ದರು. ಸ್ವಾಮೀಜಿಯೊಂದಿಗಿನ ಒಡನಾಟ ನೆನೆದು ಮಾಜಿ ಶಾಸಕ ಎಂ. ಕೆ. ಪಟ್ಟಣಶೆಟ್ಟಿ ಗದ್ಗದಿತರಾದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಳಿ ಸದಾನಂದ ಶ್ರೀಗಳ ಮೂರ್ತಿ ನಿರ್ಮಾಣಕ್ಕೆ ಅನುದಾನ ಕೋರಿದ್ದರು ಎಂದರು.
ಶೃದ್ದಾಂಜಲಿ ಸಭೆಯಲ್ಲಿ ಯುವಮುಖಂಡ ಭೀಮಸೇನ ಚಿಮ್ಮನಕಟ್ಟಿ, ನಿವೃತ್ತ ಪ್ರಾಚಾರ್ಯ ಡಾ.ಶೀಲಾಕಾಂತ ಪತ್ತಾರ ಮಾತನಾಡಿದರು. ಈ ಸಂದರ್ಭದಲ್ಲಿ ರಾಜಮಹ್ಮದ ಬಾಗವಾನ, ಮಹೇಶ ಹೊಸಗೌಡ್ರ, ಎಂ.ಬಿ.ಹಂಗರಗಿ, ಪಂಪಣ್ಣ ಕಾಚೆಟ್ಟಿ, ಶಾರದಾ ಮೇಟಿ, ಹೊನ್ನಯ್ಯ ಹಿರೇಮಠ, ಶಾಂತಾದೇವಿ ಪಟ್ಟಣಶೆಟ್ಟಿ, ಬಿ.ವಿ.ಭಂಡಾರಿ, ಈಶ್ವರಯ್ಯ ಫಳಾರಿ, ಉಮಾದೇವಿ ಪಟ್ಟಣಶೆಟ್ಟಿ, ಹನಮಂತ ಅಪ್ಪನ್ನವರ, ಹುಲಗಪ್ಪ ಭೋವಿ ಸೇರಿದಂತೆ ಮುಂತಾದವರು ಹಾಜರಿದ್ದರು.