ಶ್ರೀಗಳಿದ ದಿನಸಿ ಕಿಟ್ ವಿತರಣೆ

ಮೈಸೂರು,ಮೇ.31:- ದತ್ತ ಸೇನೆ ವತಿಯಿಂದ ಗಣಪತಿ ಸಚ್ಚಿದಾನಂದ ಆಶ್ರಮದ ಪೌಂಡರೀಕ ಕುಟೀರದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರ 79ನೇ ವರ್ಧಂತಿಯ ಅಂಗವಾಗಿ ಅಗತ್ಯವಿರುವ ಕುಟುಂಬಗಳಿಗೆ ದಿನಸಿ ಕಿಟ್ ನೀಡುವ ಕಾರ್ಯಕ್ಕೆ ಅವಧೂತ ದತ್ತಪೀಠಂ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾಂಕೇತಿಕ ಚಾಲನೆ ನೀಡಿದರು.
ಆಶ್ರಮಕೊರೋನ ಪಿಡುಗಿನ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ, ಪುರೋಹಿತರಿಗೆ ಹಾಗೂ ಕಲಾವಿದರಿಗೆ ಮಾಡುತ್ತಿರುವ ಸಹಾಯವನ್ನು ತಿಳಿಸಿದರು. ಇನ್ನೂ ಹೆಚ್ಚಿನ ಸೇವಾ ಕಾರ್ಯದಲ್ಲಿ ತೊಡಗುವಂತೆ ಪ್ರೇರಣೆ ನೀಡಿದರು. ಹಿರಿಯ ಸಮಾಜ ಸೇವಕರಾದ ಕೆ.ರಘುರಾಮ್ ಮಾತನಾಡಿ ಶ್ರೀಗಳ ನಿರಂತರ ಸೇವೆಯನ್ನು ಸ್ಮರಿಸಿ, ಶ್ರೀಗಳ ಆದೇಶದಂತೆ ಸೇವಾ ಕಾರ್ಯಗಳನ್ನು ಕೊರೋನ ಪಿಡುಗಿನ ಸಂದರ್ಭದಲ್ಲಿ ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.
ದತ್ತ ಸೇನೆಯ ಪ್ರಮುಖರಾದ ಸತ್ಯನಾರಾಯಣ, ವೆಂಕಟೇಶ್, ರಾಕೇಶ್, ಕಾರ್ತವೀರ್ಯ, ಗದಾಧರ್, ರಾಜಗೋಪಾಲ್, ಚಂದ್ರಶೇಖರ್, ಸೋಮಶೇಖರ್ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.