ಶ್ರೀಗಂಧ ಬೆಳೆದರೆ ರೈತರಿಗೆ ಅತ್ಯಧಿಕ ಆದಾಯ, ಸರ್ಕಾರಕ್ಕೂ ಆದಾಯ

ಮೈಸೂರು,ನ.9:- ರೈತರು ಒಂದು ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧ ಬೆಳೆದರೆ ಮೂರರಿಂದ ನಾಲ್ಕು ಕೋಟಿ ಆದಾಯಗಳಿಸಬಹುದು. ಈ ಕುರಿತು ರೈತರಲ್ಲಿ ಅರಿವು ಮೂಡಿಸುವ ಕೆಲಸವಾಗುತ್ತಿದೆ ಎಂದು ಡಿಸಿಎಫ್ ಕೆ.ಸಿ ಪ್ರಶಾಂತ್ ತಿಳಿಸಿದರು.
ಅವರಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕರ್ನಾಟಕ ವನ್ನು ಕನ್ನಡ ನಾಡು ಶ್ರೀಗಂಧದ ಬೀಡು ಅಂತ ಹೇಳುತ್ತೇವೆ. ಶ್ರೀಗಂಧ ಭಾರತ ದಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಮೈಸೂರಿನಲ್ಲಿ ಹೆಚ್ಚು ಹೆಸರುವಾಸಿ. ಹಲವಾರು ವರ್ಷಗಳಿಂದ ಶ್ರೀಗಂಧ ಮೈಸೂರಿನಲ್ಲಿ ಹೆಸರು ವಾಸಿ. ಇತ್ತೀಚೆಗೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದು ಶ್ರೀಗಂಧವನ್ನು ಯಾರು ಜಮೀನಿನಲ್ಲಿ ಬೆಳೆದಿರುತ್ತಾರೋ, ಯಾರು ವೈಯುಕ್ತಿಕವಾಗಿ ಬೆಳೆದಿರುತ್ತಾರೋ ಅವರಿಗೆ ಮಾಲೀಕತ್ವ ನೀಡಿರುತ್ತೇವೆ. ಒಂದು ಎಸ್ಟಿಮೇಶನ್ ಪ್ರಕಾರ ನೋಡಬೇಕೆಂದರೆ ಒಂದು ಹೆಕ್ಟೇರ್ ಲ್ಲಿ ಅಂದರೆ 2.46 ಹೆಕ್ಟೇರ್ ನಲ್ಲಿ ಶ್ರೀಗಂಧವನ್ನು ನಾಟಿ ಮಾಡಿದರೆ ಅದರಿಂದ ಕಡಿಮೆ ಅಂತಾದರೂ 3ರಿಂದ 4ಕೋಟಿ ಆದಾಯವನ್ನು 25ವರ್ಷಗಳಲ್ಲಿ ಅಷ್ಟು ಆದಾಯ ಬರತ್ತೆ. ಯಾವುದಾದರೂ ಅರಣ್ಯ ಟ್ರೀಸ್ ಬೇಸಿಸ್ ತಗೊಂಡಾಗ ಅತಿ ಹೆಚ್ಚು ಆದಾಯ ಬರುವಂತಹದ್ದು ಶ್ರೀಗಂಧ, ಇಂತಹ ಶ್ರೀಗಂಧ ಸುಮಾರು ವರ್ಷಗಳಿಂದ ಮೈಸೂರು ಸುತ್ತಮುತ್ತಲಿನ ರೈತರು, ಕೊಳ್ಳೇಗಾಲ ಸುತ್ತಮುತ್ತಲಿಜನ ರೈತರು ಬೆಳೆಯುತ್ತ ಬಂದಿದ್ದಾರೆ. ಆದರೆ ಇತ್ತೀಚೆಗೆ ಶ್ರೀಗಂಧ ಬೆಳೆಯುವುದಾಗಲಿ, ಶ್ರೀಗಂಧ ಮಾರಾಟವಾಗಲಿ ತುಂಬಾ ಕಡಿಮೆ ಆಗಿದೆ. ಹಾಗಾಗಿ ಶ್ರೀಗಂಧ ರೈತರಿಗೆ ಅರಿವು ಮೂಡಿಸಿ ಶ್ರೀಗಂಧವನ್ನು ಹೆಚ್ಚಿಗೆ ಬೆಳೆಸಬೇಕು ಮತ್ತು ಇದರಿಂದ ಇಂಟರ್ ನ್ಯಾಷನಲ್ ಎಕ್ಸಪೋರ್ಟ್ ಮಾಡಿ ಆದಾಯ ಬರತ್ತೆ ಮತ್ತು ಸರ್ಕಾರಕ್ಕೆ ರೆವೆನ್ಯೂ ಜನರೇಟ್ ಆಗತ್ತೆ ಎಂದು ತಿಳಿಸಿದರು.
ಈ ಎಲ್ಲಾ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೈಸೂರು ಶ್ರೀಗಂಧಕ್ಕೆ ಹೇಗೆ ಶ್ರೇಷ್ಠವಾಗಿದೆಯೋ ಅಂತಹ ಶ್ರೀಗಂಧದ ಬಗ್ಗೆ ಒಂದು ಮಾಹಿತಿ ನೀಡಲು , ರೈತರಲ್ಲಿ ಅರಿವು ಮೂಡಿಸಲು ಇದೆಲ್ಲ ವಿಚಾರ ನೋಡಿಕೊಂಡು ಮೈಸೂರಲ್ಲಿ ಒಂದು ಶ್ರೀಗಂಧದ ಸಂಗ್ರಹಾಲಯ ಮಾಡಬೇಕೆಂದು ನಮಗೆ ಸಚಿವರಿಂದ ನಿರ್ದೇಶನವಿತ್ತು. ಇದರ ಜೊತೆಗೆ ಇಲ್ಲಿ ಬರುವ ಪ್ರವಾಸಿಗರಿಗೆ ಅನುಕೂಲವಾಗಬೇಕೆಂದರೆ ಈ ಲೋಕೇಷನ್ ಇಂಟಿರಿಯರ್ ಆಗತ್ತೆ. ಹಾಗಾಗಿ ಪ್ರವಾಸಿಗರಿಗೆ ಅನುಕೂಲವಾಗಲು ಮೈಸೂರು ಪ್ಯಾಲೇಸ್ ಲ್ಲಿ ಆಗಬಹುದು ಅಥವಾ ಇನ್ನಿತರ ಕಡೆಯಲ್ಲಿ ಸೂಕ್ತ ಸ್ಥಳವೆಲ್ಲಿದೆ ಅದನ್ನು ಗುರುತಿಸಿ ಸ್ಥಳಾಂತರ ಮಾಡಬಹುದೆಂದು ನಿರ್ದೇಶನ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ನಾವು ಕೂಡ ವಿಚಾರ ಮಾಡುತ್ತೇವೆ. ಹೆಡ್ ಆಫ್ ಫಾರೆಸ್ಟ್ ಪೋರ್ಸ್ ನವರೊಂದಿಗೆ ಚರ್ಚೆ ಮಾಡುತ್ತೇವೆ. ಇದನ್ನು ಸ್ಥಳಾಂತರ ಮಾಡೋದಕ್ಕೆ ಅವಕಾಶವಾದರೆ ಪ್ರಪೋಸಲ್ ಮಾಡಿ ಬೇರೆಡೆ ಸ್ಥಳಾಂತರ ಮಾಡುತ್ತೇವೆ ಎಂದರು.