ಶ್ರೀಗಂಧ ಅಕ್ರಮ ಸಾಗಾಣೆ ಸಂಡೂರಿನ ಇಬ್ಬರ ಬಂಧನ

ಹೊಸಪೇಟೆ ನ 04 : ಗ್ರಾಮೀಣ ಠಾಣೆ ಪೊಲೀಸರು ನಿನ್ನೆ ನಗರದ ಸಂಡೂರು ರಸ್ತೆಯಲ್ಲಿ 36,800 ರೂ ಮೌಲ್ಯದ 18 ಕೆ.ಜಿ 40 ಗ್ರಾಂ ಶ್ರೀಗಂಧ ಮರದ ತುಂಡುಗಳು ಹಾಗೂ ಅದನ್ನು ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಂಡೂರು ತಾಲ್ಲೂಕಿನ ವೆಂಕಟಗಿರಿ ತಾಂಡದ ಚಂದ್ರ ನಾಯ್ಕ (35), ವೆಂಕಟಗಿರಿ ಕ್ಯಾಂಪಿನ ಕುಮಾರ ನಾಯ್ಕ (39) ಬಂಧಿತರು. ಅವರಿಂದ ಒಂದು ದ್ವಿಚಕ್ರ ವಾಹನ ಕೂಡ ವಶಕ್ಕೆ ಪಡೆದಿದ್ದಾರೆ.
ಶ್ರೀಗಂಧವನ್ನು ಕಳ್ಳತನ ಮಾಡಿ ಬೇರೆಡೆ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದಿತ್ತು. ಸಂಡೂರು ರಸ್ತೆಯಲ್ಲಿ ದಾಳಿ ನಡೆಸಿ ವಸ್ತುವಿನ ಜತೆಗೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆಂದು ಗ್ರಾಮೀಣ ಠಾಣೆ ಪ್ರಕಟಣೆ ತಿಳಿಸಿದೆ.