ಶ್ರೀಗಂಧದ ಸೀರಿ ಪ್ರಶಸ್ರಿಗೆ ವೀರುಪಾಕ್ಷಿ ಮರಕಂದಿನ್ನಿ ಪತ್ರಕರ್ತರು ಆಯ್ಕೆ

ಅರಕೇರಾ.ಜು.೩೦- ದೇವದುರ್ಗತಾಲ್ಲೂಕಿನ ಮರಕಂದಿನ್ನಿ ಗ್ರಾಮದ ಅರಕೇರಾ ಹೋಬಳಿಯ ಈಶ್ಯಾನ ಟೈಮ್ಸ್ ಕನ್ನಡ ದಿನಪತ್ರಿಕೆಯ ವರದಿಗಾರ ವೀರುಪಾಕ್ಷಿನಾಗಡದಿನ್ನಿಯವರು ಸುಮಾರು ೨೦೦೬ ರಿಂದ ಅರಕೇರಾ ಹೋಬಳಿಯ ವರದಿಗಾರಾಗಿ ಸೇವೆ ಸಲ್ಲಿಸಿಸುತ್ತಿದ್ದು ಈ ಭಾಗದ ಸಮಸ್ಯೆಗಳ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟಣೆಮಾಡಿ ಜನರ ನೋವಿಗೆ ಸ್ಪಂದಿಸ ಜನಪ್ರತಿನಿಧಿಗಳ ಪ್ರಗತಿಪರ ಅನಿಸಿಕೆ ಅಭಿಪ್ರಾಯ ಭಾವನೆ ಸೇತುವೆಯಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.
ಇವರಿಗೆ ೨೦೨೨-ನೇಸಾಲಿನ ಇವರ ಪ್ರತಿಕೋದ್ಯಮದಲ್ಲಿನ ಸೇವೆ ಸಾಮಾಜಿಕ ಸೇವೆಯನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕ ದೇವದುರ್ಗದವತಿಯಿಂದ ಶ್ರೀತಿಪ್ಪಣ್ಣಬಲ್ಲಿದವ ಪ್ರಾಯೋಜಿತ “ಶ್ರೀಗಂಧ ಸಿರಿ ಪ್ರಶಸ್ತಿಗೆ” ಭಾಜನರಾಗಿದ್ದಾರೆ ದಿನಾಂಕ ೩೧-೭-೨೦೨೨ ರಂದು ದೇವದುರ್ಗದಲ್ಲಿ ನಡೆಯಲ್ಲಿರುವ ಪ್ರತಿಕಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಸಂದರ್ಭದಲ್ಲಿ ಖೇಣೆದ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿರುವ ದಿನಂದು ಪ್ರಶಸ್ತಿ ಪ್ರಧಾನ ಸ್ವೀಕರಿಸಲಿದ್ದಾರೆ.
ಈಸಂದರ್ಬಧಲ್ಲಿ ಮರಕಂದಿನ್ನಿ ಗ್ರಾಮದಲ್ಲಿ ಗುರುಹಿರಿಯರು, ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಮುಖಂಡರುಗಳು ಹಾಗೂ ಅರಕೇರಾ ಹೋಬಳಿಯ ಪತ್ರಕರ್ತರು ತಾಲ್ಲೂಕಾ ಪತ್ರಕರ್ತರ ಸಂಘ ಅಭಿನಂದಿಸಿದ್ದಾರೆ.