ಶ್ರೀಕ್ಷೇತ್ರ ಬೂದನಗುಡ್ಡ ಬಸವಣ್ಣದೇವರ ರಥೋತ್ಸವ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಸೆ13: ದೇವರ ಕಾಡು ವಲಯದಲ್ಲಿರುವ ಶ್ರೀ ಕ್ಷೇತ್ರ ಬುದನಗುಡ್ಡ ಬಸವಣ್ಣ ದೇವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು ಅರಕ್ಷಕ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳು ಶ್ರೀ ಕ್ಷೇತ್ರ ಬುದನಗುಡ್ಡ ಬಸವಣ್ಣ ದೇವರ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ರಥೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಸಿದ್ದು ರಾಯನಾಳ, ಮಂಜುನಾಥ ಲೂತಿಮಠ, ಸುರೇಶ ದ್ಯಾಮನ್ನವರ, ಅಕ್ಷಯಕುಮಾರ ಎಮ್ಮಿ, ಅಣ್ಣಪ್ಪ ರಾಯನಾಳ, ಕಿರಣ ಯಲಗೊಡ, ಶ್ಯಾಸ್ತ್ರಿಗಳಾದ ಅಭಿಷೇಕ ಹಿರೇಮಠ ಚನ್ನಯ್ಯ ಬಸಯ್ಯ ಚಳಮಟ್ಟಿ, ಪರಸಾಪುರ,ಅಂಚಟಗೇರಿ, ಕುರವಿನಕೊಪ್ಪ, ದುಮ್ಮವಾಡ , ದೇವರಗುಡಿಹಾಳ , ಮಿಶ್ರಿಕೊಟಿ, ಉಗ್ಗಿನಕೇರಿ, ನೂರಾರು ಸುತ್ತ ಮುತ್ತ ಲಿನ ಭಕ್ತರು ಓಂ ನಮಃ ಶಿವಾಯ, ಹರ ಹರ ಮಹಾದೇವ ಎಂಬ ಘಂಟಾಘೋಷವನ್ನು ಮೊಳಗಿಸುತ್ತಾ ಪಾಲ್ಗೊಂಡಿದ್ದರು.