ಶ್ರೀಕ್ಷೇತ್ರ ಕೊಡದಗುಡ್ಡದ ಶ್ರೀ ವೀರಭದ್ರ ಸ್ವಾಮಿ ರಥೋತ್ಸವ


ವರದಿ -: ಹೆಚ್.ಬಾಬು ಮರೇನಹಳ್ಳಿ 
ಸಂಜೆವಾಣಿ ವಾರ್ತೆ
ಜಗಳೂರು.ಮಾ.೨೧; ತಾಲ್ಲೂಕಿನ ಸುಕ್ಷೇತ್ರ ಕೊಡದ ಗುಡ್ಡದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ  ಮಾ. 26 ರಂದು 4.30 ಸಮಯಕ್ಕೆ ಜರುಗಲಿದೆ.ಜಗಳೂರು ತಾಲೂಕು ಸುಕ್ಷೇತ್ರ ಕೊಡದಗುಡ್ಡ ವೀರಭದ್ರೇಶ್ವರ ತೇರು ಬಾಗಿಲು ಆವರಣದಲ್ಲಿ ವಿಶಾಲವಾದ ಹೊರಾಂಗಣದಲ್ಲಿ ವಿಶೇಷ ಜಾತ್ರಮಹೋತ್ಸವ ಸಹ ಜರುಗಲಿದ್ದು ಕರ್ನಾಟಕ ರಾಜ್ಯದ ನಾನಾ ಭಾಗಗಳಿಂದ ಆಪಾರ ಭಕ್ತ ಸಮೂಹ ಸ್ವಾಮಿಯ ರಥೋತ್ಸವಕ್ಕೆ ಆಗಮಿಸುವರು ಇನ್ನು ರಥೋತ್ಸವದ ಅಂಗವಾಗಿ ಸುಕ್ಷೇತ್ರದಲ್ಲಿ ವಿಶೇಷವಾಗಿ ವಿವಿಧ ಪೂಜಾ ಪುನಸ್ಕಾರಗಳು ನಡೆಯಲಿವೆ. ಜಿಲ್ಲೆಯ ವಿವಿಧ ಸದ್ಭಕ್ತರು ನಾನಾ ಭಾಗಗಳಿಂದ ಆಗಮಿಸುವವರಿಗೆ ಅತಿಥಿ‌ ಗೃಹ ಸೇರಿದಂತೆ ಕೆಲ ಗ್ರಾಮೀಣ ಭಾಗದ ಭಕ್ತರು ಪೌಳಿ ಬಿಡಾರ ಹಾಕಿ ಸಾರ್ವಜನಿಕರು ತಂಗುವರು ಜಾತ್ರಮಹೋತ್ಸವಕ್ಕೆ ವಿಶೇಷ ಸಾರಿಗೆ ಸೌಲಭ್ಯಗಳಿವೆ.ಇಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ .ಒಟ್ಟಾರೆ ವೀರಭದ್ರೇಶ್ವರ ರಥೋತ್ಸವಕ್ಕೆ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗಿ ರಥೋತ್ಸವ ಸಾಗುವ ಸಂದರ್ಭದಲ್ಲಿ ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಶ್ರೀ ವೀರಭದ್ರೇಶ್ವರ ಸ್ವಾಮಿಯನ್ನು ಬೇಡಿಕೊಳ್ಳುವ ಪದ್ಧತಿ ಇದೆ.ಬರದ ನುಡುವೆಯು ವೀರಭದ್ರ ಸ್ವಾಮಿಯ ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ ಮಾ.26 ರಥೋತ್ಸವ ನಡೆಯಲಿದ್ದು ಕುಡಿಯುವ ನೀರು ನೆರಳಿನ ಸೌಲಭ್ಯ ನಡೆಯುತ್ತಿದ್ದು ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.ಹರಕೆ ಹೊತ್ತ ಭಕ್ತರು  ವೀರಭದ್ರ ಸ್ವಾಮಿಯ ರಥೋತ್ಸವದ ಆವರಣದಲ್ಲಿ ಸಾವಿರಾರು ಭಕ್ತರು ಪರವು ಮಾಡುವುದು ಪೂರ್ವಜರ ಕಾಲದಿಂದಲೂ ನಡೆದು ಬಂದಿದೆ ಈ ಬಾರಿಯ ಪರವುಗಳು ನಡೆಯುತ್ತವೆ ವೀರಭದ್ರೇಶ್ವರ ಟ್ರಸ್ಟ್ ಗುರುತಿಸಿರುವ ಕಡೆ ಪರುವುಗಳು ನಡೆಯಲಿದ್ದು ಅಲ್ಲಿ ಬೇಕಾದ ಕುಡಿಯುವ ನೀರಿನ ವ್ಯವಸ್ಥೆ ಭಕ್ತರು ಉಳಿದುಕೊಳ್ಳಲು ಜಾಗ ನೆರಳಿನ ವ್ಯವಸ್ಥೆ ಇತ್ಯಾದಿ ಬೇಕಾದ ಭಕ್ತರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ” 26ರಂದು ನಡೆಯಲಿರುವ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಕಾರ್ಯಕ್ರಮಗಳು ಈ ರೀತಿ ಇವೆ 22 ರಂದು ಕಂಕಣ ಧಾರಣೆ 23 ಮಹಾಗಣರಾಧನೆ 24 ಗಜವನೋತ್ಸವ .25 ರಂದು ವೃಷಭೋನೋತ್ಸವ 26 ರಂದು ಬೆಳಿಗ್ಗೆ 6 ಕೆಂಡೋತ್ಸವ ಸಂಜೆ 4:30ಕ್ಕೆ ರಥೋತ್ಸವ ನೆರವೇರಲಿದೆ. ಕಳೆದ ಮೂರು ವರ್ಷದಿಂದ ಕೊಡದಗುಡ್ಡ ಜಾತ್ರೆಯಲ್ಲಿ ಎತ್ತುಗಳ ಸಂತೆ ಏಪ್ರಿಲ್ 7 ವರೆಗೆ  ನಡೆಯಲಿದ್ದು ವಿವಿಧ ಜಾತಿಯ ತಳಿಯ ರಾಸುಗಳು ರಾಜ್ಯದ ವಿವಿಧ ಮೂಲೆಗಳಿಂದ  ಈ ಸಂತೆಗೆ ಬರಲಿವೆ ಇಲ್ಲಿನ ರೈತರು ಮುಂಗಾರಿನ ಕೃಷಿಗೆ ಬೇಕಾದ ಅಗತ್ಯ ಎತ್ತುಗಳನ್ನು ಖರೀದಿಸಲಿದ್ದಾರೆ.