ಶ್ರೀಕೋಕಿಲಾ ಪರಮೇಶ್ವರಿ ದೇವಸ್ಥಾನದ 10 ನೇ ವಧರ್ಂತಿ ಮಹೋತ್ಸವ

ಕಲಬುರಗಿ:ಮಾ.2: ಮಾತಾ ಮಾಣಿಕೇಶ್ವರಿ ನಗರದ ಶ್ರೀ ಕೋಕಿಲಾ ಪರಮೇಶ್ವರಿ ದೇವಸ್ಥಾನದ 10 ನೇ ವಧರ್ಂತಿ ಮಹೋತ್ಸವ ಸೋಮವಾರ ದಿನಾಂಕ 04 ಮಾರ್ಚ 2024 ರಂದು ಪ್ರಾರಂಭವಾಗಿ ಮಂಗಳವಾರ ದಿನಾಂಕ 05 ಮಾರ್ಚ 2024 ಮಂಗಲಗೊಳ್ಳುವದು. ಸೋಮವಾರ ದಿನಾಂಕ 04 ರಂದು ಸಾಯಂಕಾಲ 6=00 ಗಂಟೆಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಆಚಾರ್ಯರು ಹಾಗೂ ಶ್ರೀ ಪ್ರಶಾಂತಾಚಾರ್ಯರು ಕಟ್ಟಿ ಇವರಿಂದ ಶ್ರೀ ಕೋಕಿಲಾಪರಮೇಶ್ವರಿ ದೇವಿಗೆ ಅಭಿಷೇಕ ವಿಶೇಷ ಪೂಜೆಯೊಂದಿಗೆ ಪ್ರಾರಂಭವಾಗುವದು.ಜಾಗರಣೆ ನಿಮಿತ್ಯ ವಿವಿಧ ಕಲಾವಿದರಿಂದ ಭಜನೆ ಜರಗುವದು . ಮಂಗಳವಾರ ದಿನಾಂಕ 05 ಮಾರ್ಚ 2024 ರಂದು ಬೆಳಿಗ್ಗೆ 6=00 ಗಂಟೆಗೆ ಶ್ರೀ ಕೋಕಿಲಾಪರಮೇಶ್ವರಿ ದೇವಿಗೆ ಅಭಿಷೇಕ ವಿಶೇಷ ಅಲಂಕಾರ ಪೂಜೆ ಜರುಗಿ . ಬೆಳಿಗ್ಗೆ 10=00 ಗಂಟೆಗೆ ಶ್ರೀ ಕೋಕಿಲಾಪರಮೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ಜರಗುವದು. ಪಲ್ಲಕ್ಕಿ ಉತ್ಸವವು ವಿವಿಧ ಕಲಾಮೇಳಗೊಳೊಂದಿಗೆ ಮಾತಾ ಮಾಣಿಕೇಶ್ವರಿ ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 1=00 ಗಂಟೆಗೆ ಉತ್ಸವವು ದೇವಸ್ಥಾನ ತಲುಪಿದ ನಂತರ ಮಹಾಪ್ರಸಾದದೊಂದಿಗೆ ವಧರ್ಂತಿ ಮಹೋತ್ಸವ ಮಂಗಲಗೊಳ್ಳುವದು ಅತ್ಯಂತ ವಿಜೃಂಭಣೆಯಿಂದ ಜರುಗುವ ಈ ಶ್ರೀ ಕೋಕಿಲಾಪರಮೇಶ್ವರಿ ದೇವಸ್ಥಾನದ ದಶಮಾನತ್ಸವ ವಧರ್ಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಲ್ಲಿಕಾರ್ಜುನ ಜೋಕೆ ಮನವಿ ಮಾಡಿದ್ದಾರೆ.