ಶ್ರೀಕೃಷ್ಣ ದೇವರಾಯ ಮಾದರಿ ಆಡಳಿತಗಾರ

ಕಲಬುರಗಿ,ಜ.17: ವಿಜಯನಗರ ಸಾಮಾಜ್ಯದ ಅರಸ ಶೀಕೃಷ್ಣ ದೇವರಾಯರ ಆಡಳಿವು ಕೇವಲ ಸೈನಿಕ ದಿಗ್ವಿಜಗಳಿಗೆ ಮಾತ್ರ ಸೀಮಿತವಾಗಿರದೆ, ಉತ್ತಮ ಆಡಳಿತ, ಕಲೆ, ಸಾಹಿತ್ಯ, ಪರಂಪರೆ, ವಾಸ್ತುಶಿಲ್ಪಕ್ಕೆ ಆದ್ಯತೆಯನ್ನು ನೀಡುವ ಮೂಲಕ ಸುವರ್ಣಯುಗವಾಗಿತ್ತು. ಒಬ್ಬ ಆಡಳಿತಗಾರ ಹೇಗೆ ಸಮಾಜಕ್ಕೆ ಮಾದರಿಯಾಗಿರಬೇಕೆಂದು ತಮ್ಮ ಜನಪರ ಆಡಳಿತದ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ ಎಂದು ಹಿರಿಯ ಸಾಹಿತಿ ಬಿ.ಕೆ.ಹಳ್ಳಿ ಅಭಿಪಾಯಪಟ್ಟರು.
ನಗರದ ಎಸ್.ಟಿ.ಬಿ.ಕಾಸ್ ಸಮೀಪವಿರುವ ‘ಮಾತೋಶೀ ಮಹಿಳಾ ಪದವಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಶೀಕೃಷ್ಣ ದೇವರಾಯರ 552ನೇ ಜಯಂತೋತ್ಸವ’ ಕಾರ್ಯಕಮದಲ್ಲಿ ಭಾವಚಿತಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಜಿ.ಪಂ, ಮಾಜಿ ಸದಸ್ಯ ಬಸವರಾಜ ಬೆಣ್ಣುರಕರ್ ಮಾತನಾಡಿ, ಶೀಕೃಷ್ಣದೇವರಾಯನ ಆಡಳಿತದಲ್ಲಿ ನಾಗರಿಕರ ಸಲಹೆಗಳನ್ನು, ಅವರಿಗೆ ಬೇಕಾದ ಸೌಲಭ್ಯ ಹಾಗೂ ಹಕ್ಕುಗಳನ್ನು ನೀಡುವ ಮೂಲಕ ಪಜಾಪಭುತ್ವ ಅಂಶಗಳನ್ನು ಕಾಣಬಹುದಾಗಿದೆ. ಹಲವಾರು ನೀರಾವರಿ ಯೋಜನೆಗಳನ್ನು ಮಾಡಿ ಕೃಷಿ ಅಭಿವೃದ್ಧಿ ಮತ್ತು ವಾಣಿಜ್ಯ ಅಭಿವೃದ್ಧಿಗೆ ಶಮಿಸಿದ್ದಾರೆ. ಇತಿಹಾಸತಜ್ಞರು ಅವರನ್ನು ಅತ್ಯಂತ ಸಮರ್ಥ, ದಕ್ಷ, ಮಾದರಿ ಆಡಳಿತಗಾರನೆಂದು ಗುರ್ತಿಸಿದ್ದಾರೆ ಎಂದು ಹೇಳಿದರು.
ಕಾರ್ಯಕಮದಲ್ಲಿ ಎಚ್.ಬಿ.ಪಾಟೀಲ, ಡಾ.ಸುನೀಲಕುಮಾರ ವಂಟಿ, ಡಾ.ಶಿವಶಂಕರ ಪೂಜಾರಿ, ಶಿವಯೋಗಪ್ಪ ಬಿರಾದಾರ, ದೇವೇಂದಪ್ಪ ಗಣಮುಖಿ, ರವಿ ಪವಾರ, ಬೀರಣ್ಣ ಪೂಜಾರಿ ಸೇರಿದಂತೆ ಮತ್ತಿತರರಿದ್ದರು.