
ಕಲಬುರಗಿ,ಸೆ 7: ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಇಲ್ಲಿನ ವಿದ್ಯಾಮಂದಿರ ಶ್ರೀಕೃಷ್ಣ ಮಂದಿರದಲ್ಲಿ ಕಲಬುರ್ಗಿಯವಿಶ್ವ ಮಧ್ವ ಮಹಾ ಪರಿಷತ ಘಟಕದ ಎಲ್ಲಸ ಪಾರಾಯಣ ಸಂಘಗಳಿಂದ ಇಂದು ಬೆಳಿಗ್ಗೆ ವಿಶೇಷವಾಗಿ ವೆಂಕಟೇಶ ಸ್ತೋತ್ರ ,ವಿಷ್ಣುಸಹಸ್ರನಾಮ,ಲಕ್ಷ್ಮೀ ಸ್ತೋತ್ರ, ಸುಂದರ ಕಾಂಡ ಪಾರಾಯಣ ಮಾಡಲಾಯಿತು. ಪಾರಾಯಣಗಳ ಸಂಚಾಲಕ ರವಿ ಲಾತೂರಕರ ಮಾತನಾಡಿ ಮುಂದಿನ ದಿನಗಳಲ್ಲಿ ಕಲಬುರಗಿಯ ಎಲ್ಲ ಪಾರಾಯಣ ಸಂಘಗಳು ಇದೇ ರೀತಿ ಎಲ್ಲರೂ ಸೇರಿ ಪಾರಾಯಣ ಮಾಡೋಣ ಈ ರೀತಿ ಪಾರಾಯಣ ಮಾಡುವುದರಿಂದ ಎಲ್ಲರ ಜೊತೆ ಹೊಂದಿಕೊಂಡು ಪಾರಾಯಣ ಮಾಡುವ ಮನಸ್ಥಿತಿ ಬರುತ್ತದೆ.ಕೆಲವರು ನಿಧಾನವಾಗಿ ಹೇಳುತ್ತಾರೆ ಕೆಲವರು ಬೇಗ ಅನ್ನುತ್ತಾರೆ. ಆದರೆ ಎಲ್ಲರೂ ಮಾಡುವುದು ಭಗವಂತನಿಗಾಗಿ. ಎಲ್ಲರಿಗೂ ದೇವರು ಕರುಣಿಸುತ್ತಾನೆ ಎಂದು ಹೇಳಿದರು.
ಪಾರಾಯಣ ಸಂಚಾಲಕ ರವಿ ಲಾತೂರಕರ,ಭೀಮಸೇನರಾವ ದೇಶಪಾಂಡೆ ಆಡಕಿ,ರಾಘವೇಂದ್ರ ಆಶ್ರಿತ,ಜಗನ್ನಾಥ ಮೊಗರೆ,ಜಗನ್ನಾಥ ಸಗರ, ಡಾ ರವೀಂದ್ರ ಕುಲಕರ್ಣಿ, ಡಾ ಶ್ರೀ ನಿವಾಸ ಜಾಗಿರದಾರ,ಜಿ ಆರ್ ಜೋಶಿ, ಮಧ್ವ ಮಂಡಲ ಮಂಡಲ ಮಾಜಿ ವಿದ್ಯಾರ್ಥಿಗಳಾದ ರಾಮಾಚಾರ್ಯ ನಗನೂರ, ಶೇಷಮೂರ್ತಿ ಅವಧಾನಿ, ಸಂಜೀವ ಮಹಿಪತಿ ,ಪ್ರಾಣೇಶ ದೇಶ್‍ಮುಖ ಅವರು ಕಾರ್ಯದರ್ಶಿಕಿಶೋರ್ ದೇಶಪಾಂಡೆ ಅವರನ್ನು ಶಾಲು ಹೊದಿಸಿ ಮಧ್ವಾಚಾರ್ಯರ ಭಾವಚಿತ್ರವನ್ನು ಕೊಟ್ಟು ಸನ್ಮಾನಿಸಿದರು. ವಿನುತ ಜೋಶಿ, ಅನಿಲ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಸುರೇಶ್ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.