ಶ್ರೀಕೃಷ್ಣನ ಆದರ್ಶ ಪಾಲಿಸಿ

ಶಹಾಬಾದ್:ಸೆ.7:ಈ ಜಗತ್ತಿನಲ್ಲೇ ಅತಿ ಹೆಚ್ಚು ಪೂಜಿಸಲ್ಪಡುತ್ತಿರುವ ಶ್ರೀಕೃಷ್ಣನ ಆದರ್ಶಗಳನ್ನು ಪಾಲಿಸಬೇಕು ಎಂದು ಶಾಲೆಯ ಮುಖ್ಯಗುರು ಮಲ್ಲಮ್ಮ ಹೇಳಿದರು. ಅವರು ನಗರದ ಹಳೆ ಶಹಾಬಾದ ಬಡಾವಣೆಯ ನಂದಗೋಕುಲ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ಜನ್ಮಾಷ್ಟಮಿಯ ನಿಮಿತ್ತ ಮಕ್ಕಳಿಗೆ ಕೃಷ್ಣ ಹಾಗೂ ರಾಧೆ ವೇಷ ಭೂಷಣ ಸ್ಪರ್ಧೆಯನ್ನು ಏರ್ಪಡಿಸಿ ಉತ್ತಮ ವೇಷಭೂಷಣ ಮಾಡಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಚವ್ಹಾಣ್, ಶಿಕ್ಷಕಿ ಸೈಯದಾ ಉಜ್ಮಾ, ಪಾಲಕರು ವಿದ್ಯಾರ್ಥಿಗಳು ಪಾಲ್ಗೊಂಡಿದರು.