ಶ್ರೀಕೃಷ್ಣದೇವರಾಯ ವಿವಿ ಘಟಿಕೋತ್ಸವ

ಬಳ್ಳಾರಿ, ಡಿ. ೨೮- ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ತನ್ನ ಎಂಟನೇ ಘಟಿಕೋತ್ಸವ ನಾಳೆ ನಡೆಯಲಿದ್ದು, ಮಂತ್ರಾಲಯ ಮಠದ ರಾಜಾ ಎಸ್.ಗಿರಿ ಆಚಾರ್ಯರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ವಿವಿಯ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು ಅವರು ಇಂದು ವಿವಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಪ್ರಕಟಿಸಿದ್ದಾರೆ.
ವಿವಿಯ ಘಟಿಕೋತ್ಸವವನ್ನು ನಾಳೆ ಬೆಳಿಗ್ಗೆ ೧೧ ಗಂಟೆಗೆ ವಿವಿಯ ಬಯಲು ರಂಗ ಮಂದಿರದಲ್ಲಿ ಘಟಿಕೋತ್ಸವ ಸಮಾರಂಭ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಾಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ವಿದ್ಯಾಲಯದ ಅನುದಾನ ಆಯೋಗ (ಯುಜಿಸಿ) ದ ಕಾರ್ಯದರ್ಶಿ ಪ್ರೊ.ರಜನೀಶ್ ಜೈನ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಅವರು ಆನ್ ಲೈನ್ ಮೂಲಕವೇ ಭಾಷಣ ಮಾಡಲಿದ್ದಾರೆ.
ಅಲ್ಲದೆ ವಿವಿಧ ವಿಭಾಗದ ೫೨ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳು, ೪೩ ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಲಿದೆ.
ವಿವಿ ವ್ಯಾಪ್ತಿಯ ವಿವಿಧ ಪದವಿಗಳಲ್ಲಿ ಶೇ ೮೫.೫೧ ರಷ್ಟು ತೇರ್ಗಡೆ ಪ್ರಮಾಣ ಇದೆ.
ಪದವಿ ವಿಭಾಗದಲ್ಲಿ ಶೇ.೮೧.೬೭ ರಷ್ಟು ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಶೇ.೯೫.೨೫ ರಷ್ಟು ತೇರ್ಗಡೆ ಪ್ರಮಾಣ ಹೊಂದಿದೆ.
ಜೀವಾಣು ಶಾಸ್ತ್ರ ವಿಭಾಗವನ್ನು ಖನಿಜ ನಿಧಿಯ ಎಂಟು ಕೋಟಿ ರೂ ಅನುದಾನದಲ್ಲಿ ನಿರ್ಮಾಣ ಮಾಡುತ್ತಿದೆ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಸ್ನಾತಕೋತ್ತರ ಪದವಿಗಳಿಗೆ ಸಂಪೂರ್ಣ ಆನ್ ಲೈನ್ ನಲ್ಲಿ ಪ್ರವೇಶ ಪಡೆದಿದೆ ಇದು ರಾಜ್ಯದಲ್ಲಿಯೇ ಈ ಒಂದು ವಿವಿಯಿಂದ ವಿಶೇಷ ಪ್ರಯತ್ನ ಆಗಿದೆ ಎಂದರು.
ಇದಕ್ಕೆ ಬಹುತೇಕ ಉತ್ತಮ ಅಭಿಪ್ರಾಯ ಬಂದಿದೆ ಎಂದರು.
ವಿವಿಯ ಪಕ್ಕದಲ್ಲಿರುವ ಹಳೇ ಕಾಟನ್ ಮಿಲ್ ನ ನಿವೇಶನವನ್ನು ವಿವಿಗೆ ಪಡೆಯುವ ವಿಷಯ ಇನ್ನೂ ನಡೆದಿದೆ. ಈ ವರ್ಷದ ಅಭಿವೃದ್ಧಿ ಅನುದಾನವಾಗಿ ಸರ್ಕಾರ ೫೦ ಲಕ್ಷ ರೂ ನೀಡಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕುಲಸಚಿವರಾದ ಪ್ರೊ. ತುಳಸಿ ಮಾಲಾ, ಪ್ರೊ.ಶಶಿಕಾಂತ್ ಎಸ್ ಹುಡಕೇರಿ ಇದ್ದರು.