ಶ್ರೀಕೃಷ್ಣದೇವರಾಯ ವಿವಿಯ 8 ನೇ ಘಟಿಕೋತ್ಸವ ರಾಜ್ಯಪಾಲರು, ಸಚಿವರೂ ಗೈರು

ಬಳ್ಳಾರಿ:ಡಿ.29- ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಎಂಟನೇ ಘಟಿಕೋತ್ಸವ ಇಂದು ವಿವಿಯ ಬಯಲು ರಂಗ ಮಂದಿರದಲ್ಲಿ ವಿವಿಯ ಕುಲಾಧಿಪತಿಗಳಾದ ರಾಜ್ಯಪಾಲರೂ, ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಆಸ್ವತ್ಥ ನಾರಾಯಣ ಅವರ ಗೈರು ಹಾಜರಿಯಲ್ಲಿ ನಡೆಯಿತು.
ಅವರ ಗೈರು ಹಾಜರಿಯಿಂದಾಗಿ‌ ಕುಲಪತಿ ಪ್ರೊ.ಸಿದ್ದು ಪಿ ಅಲಗೂರು ಅವರು ಘಟಿಕೋತ್ಸವ ಉದ್ಘಾಟಿಸಿದರು. ಮತ್ತು ಮಂತ್ರಾಲಯದ ರಾಜ ಎಸ್.ಗಿರಿ ಆಚಾರ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಿವಿಯ ಬೆಳವಣಿಗೆ ಕುರಿತು ಕುಲಸಚಿವೆ ಪೊ.ತುಳಸಿಮಾಲ ಮಾತನಾಡಿ, ನಮ್ಮ ವಿವಿ ಬಳ್ಳಾರಿ, ನಂದಿಹಳ್ಳಿ, ಯಲಬುರ್ಗ ಮತ್ತು ಕೊಪ್ಪಳದಲ್ಲಿ ಅಧ್ಯಯನ ಕೇಂದ್ರಗಳನ್ನು ಹೊಂದಿದ್ದು. ದಶಮಾನೋತ್ಸವವನ್ನು ಈ ವರ್ಷ ಆಚರಿಸುತ್ತಿದೆ. ವಿದ್ಯಾರ್ಥಿಗಳ ಪ್ರವೇಶ ಹೆಚ್ಚಿಸಲು ವ್ಯಾಸಂಗ ವಿಷಯಗಳ ಗಾತ್ರ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವುದು, ಪಠ್ಯ ಕ್ರಮದ ಗುಣ ಮಟ್ಟ ಸುಧಾರಣೆ ಮತ್ತು ಸ್ನಾತಕೋತ್ತರ ಕೇಂದ್ರ ಹೆಚ್ಚಳಕ್ಕೆ ಯೋಜನೆ ರೂಪಿಸಿದೆ.
ವಿವಿಗೆ ಕಳೆದ ವರ್ಷ 12 ಬಿ ಮಾನ್ಯತೆ ದೊರೆತಿದೆ. ಇದು ನಮ್ಮ ವಿವಿಯ ಶೈಕ್ಷಣಿಕ ಹಾಗು ಸಂಶೋಧನಾ ಕಾರ್ಯಗಳಿಗೆ ಹೊಸ ರೂಪ ತಂದುಕೊಟ್ಟಿದೆ. ನ್ಯಾಕ್ ಮಾನ್ಯತೆಯನ್ನು ಪಡೆದಿದೆ ಎಂದು ತಿಳಿಸಿದರು.
ವಿವಿಯ ಆಧ್ಯಯನ ಸುಧಾರಣೆಗೆ ವಿಶ್ವದ ವಿವಿಧ ವಿವಿಗಳ ಜೊತೆ ಪರಸ್ಪರ ತಿಳುವಳಿಕೆ ಮತ್ತು ಸಹಯೋಗ ಹೊಂದಿರುವುದಾಗಿ ತಿಳಿಸಿದರು.
ಜೊತೆಗೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಹಳ್ಳಿ ಮತ್ತು‌ ನಗರದ ಕೊಳಚೆ ಪ್ರದೇಶಗಳನ್ನು ದತ್ತು ಪಡೆದು ಆರೋಗ್ಯ ಮತ್ತು ಶಿಕ್ಷಣದ ಮಹತ್ವವನ್ನು ಕೇಂದ್ರ ಮತ್ತು ರಾಜ್ಯದ ವಿವಿಧ ಯೋಜನಗಳ‌ ಮೂಲಕ‌ ಅರಿವು‌ ಮೂಡಿಸಿದೆ. ಈ ವರ್ಷ ಹತ್ತು ಶಾಲೆಗಳನ್ನು‌ ದತ್ತು ಪಡೆದಿದೆಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ಗಣ್ಯರುಲನ್ನು ವಿವಿಯ ಆಡಳಿತ ಭವನದಿಂದ ವೇದಿಕೆಗೆ ಮೌಲ್ಯ ಮಾಪನ ಕುಲಸಚಿವ ಶಶಿಕಾಂತ ಎಸ್.ಉಡಿಕೇರಿ ಅವರು ರಜತ ದಂಡ ಹಿಡಿದು ಘಟಿಕೋತ್ಸವ ಮೆರವಣಿಗೆಯಲ್ಲಿ ಕರೆತಂದರು. ಕುಲಪತಿ, ಕುಲಸಚಿವರು, ಗೌಡ ಪಡೆದ ಗಣ್ಯರು ವಿಜಯನಗರ ಅರಸರು ತೊಡುತ್ತಿದ್ದ ಮುತ್ತು ರತ್ನ ಖಚಿತ ಮಾದರಿಯ ಪೇಠವನ್ನು ತೊಟ್ಟಿದ್ದು ಆಕರ್ಷಕವಾಗಿತ್ತು.
ರಾಷ್ಟ್ರಗೀತೆ, ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪ್ರೊ ಶಾಂತಾನಾಯಕ್ ಕಾರ್ಯಕ್ರಮ ನಿರೂಪಿಸಿದರು.


ಮಂತ್ರಾಲಯ ಮಠದಿಂದ ಸಧ್ಯದಲ್ಲೇ ವಿವಿ ಸ್ಥಾಪನೆ
ಇಂದು ವಿಜಯನಗರ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪದವಿ‌ಪಡೆದ ಮಂತ್ರಾಲಯ ಮಠದ ವಿದ್ವಾನ್ ರಾಜಾ ಎಸ್.ಗಿರಿ ಆಚಾರ್ಯ ಅವರು ಮಂತ್ರಾಲಯ ಮಠದಿಂದ ಸಧ್ಯದಲ್ಲೆ ರಾಘವೇಂದ್ರ ಸ್ವಾಮಿಗಳ ಹೆಸರಲ್ಲಿ ಮಠದಿಂದ ವಿಶ್ವ ವಿದ್ಯಾಲಯ ಆರಂಭಿಸಲು ಮಠದ ಶ್ರೀಗಳು ಉದ್ದೇಶಿಸಿದ್ದಾರೆ ಎಂದು ತಿಳಿಸಿದರು.
ಇನ್ನು‌ಅಂದಿನ‌ತಮ್ಮ ಆಡಳಿತದಲ್ಲಿ ಹತ್ತಾರು ರಾಜಗುರು, ವಿದ್ವಾನ್ ಪಂಡಿತೋತ್ತಮರಿಗೆ ಆಶ್ರಯ ನೀಡಿದ್ದ ಶ್ರೀಕೃಷ್ಣ ದೇವರಾಯನ ಹೆಸರಿನ ವಿವಿಯಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವುದು ಅಂತಸ ತಂದಿದೆ ಎಂದರು.

Spread the love