ಶ್ರೀಕಲ್ಲೇಶ್ವರ ದೇವಸ್ಥಾನಕ್ಕೆ ಭೂಮಿಪೂಜೆ

ಕೂಡ್ಲಿಗಿ.ನ.21:- ತಾಲೂಕಿನ ಚಂದ್ರಶೇಖರಪುರದಲ್ಲಿ ಶುಕ್ರವಾರ ಗ್ರಾಮದ ಆರಾಧ್ಯ ದೈವ ಶ್ರೀ ಕಲ್ಲೇಶ್ವರ ಸ್ವಾಮಿಯ ದೇವಸ್ಥಾನದ ಕಟ್ಟಡಕ್ಕೆ ಸ್ವಾಮೀಜಿಗಳು ಮತ್ತು ಗ್ರಾಮದ ಭಕ್ತವೃಂದದಿಂದ ಭೂಮಿಪೂಜೆ ನೆರವರಿಸಲಾಗಿತ್ತು.
ಕೂಡ್ಲಿಗಿ ಹಿರೇಮಠದ ಶ್ರೀಗಳಾದ ಪ್ರಶಾಂತಸಾಗರ ಸ್ವಾಮೀಜಿಗಳ ಹಾಗೂ ಇತರೆ ಸ್ವಾಮೀಜಿಗಳ ಸಾನಿಧ್ಯದಲ್ಲಿ ಗ್ರಾಮದ ಸಕಲ ಭಕ್ತವೃಂದದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಯ ದೇವಸ್ಥಾನ ಆವರಣದಲ್ಲಿ ಪೂಜಾ ಕಾರ್ಯಗಳನ್ನು ನಡೆಸುವ ಮೂಲಕ ಭೂಮಿಪೂಜೆ ನೆರವೇರಿಸಲಾಗಿತ್ತು.