ಶ್ರೀಕಂಠೇಶ್ವರ ಸ್ವಾಮಿಯವರ ತೆಪೆÇ್ಪೀತ್ಸವ

ಸಂಜೆವಾಣಿ ನ್ಯೂಸ್
ನಂಜನಗೂಡು.ಮಾ.25:- ಇಲ್ಲಿನ ಪುರಾಣ ಪ್ರಸಿದ್ದ ಶ್ರೀಕಂಠೇಶ್ವರಸ್ವಾಮಿಯವರ ದೊಡ್ಡ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ರಾತ್ರಿ ಕಪಿಲಾನದಿಯ ತೇಲುವ ದೇವಾಲಯದಲ್ಲಿ ಶ್ರೀಕಂಠೇಶ್ವರಸ್ವಾಮಿಯವರ ತೆಪೆÇ್ಪೀತ್ಸವವು ಸಾವಿರಾರು ಭಕ್ತರ ಹರ್ಷೋದ್ಗಾರ, ಕರತಾಡನದ ನಡುವೆ ವಿಜೃಂಭಣೆಯಿಂದ ನಡೆಯಿತು.
ಭಾನುವಾರ ಬೆಳಿಗ್ಗೆ ದೇವಾಲಯದಲ್ಲಿ ಶ್ರೀಕಂಠೇಶ್ವರ ಸ್ವಾಮಿಗೆ ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥ ಸ್ನಾನ, ಪಂಚಾಮೃತ ಅಭಿಷೇಕಗಳನ್ನು ನಡೆಸಲಾಯಿತು. ನಂತರ ರಾತ್ರಿ 7 ಗಂಟೆಯಲ್ಲಿ ದೇವಾಲಯದಿಂದ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಖುತ್ವಿಕರು ಮಂಗಳ ವಾದ್ಯದೊಡನೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಕಪಿಲಾ ನದಿಯ ದಡದಲ್ಲಿನ ಶಾಸ್ತ ಮಂಟಪಕ್ಕೆ ಕರೆತರಲಾಯಿತು. ಪ್ರಧಾನ ಅರ್ಚಕ ನಾಗಚಂದ್ರ ಧೀಕ್ಷಿತ್ ಹಾಗೂ ಅರ್ಚಕ ವೃಂದ ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಶಾಸ್ತ ಮಂಟಪದಲ್ಲಿ ಇರಿಸಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ನಂತರ ವಿದ್ಯುತ್ ದೀಪಾಲಂಕೃತ ತೇಲುವ ದೇವಾಲಯದಲ್ಲಿ ಶ್ರೀಯವರನ್ನು ಪ್ರತಿಷ್ಠಾಪಿಸಿ ತೆಪೆÇ್ಪೀತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಶ್ರದ್ದಾ-ಭಕ್ತಿಯಿಂದ ತೆಪೆÇ್ಪೀತ್ಸವವನ್ನು ವೀಕ್ಷಿಸಿ ವಿಜೃಂಭಣೆಯ ತೆಪೆÇ್ಪೀತ್ಸವಕ್ಕೆ ಸಾಕ್ಷಿಯಾದರು.
ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಉತ್ಸವಮೂರ್ತಿಯನ್ನು ವಿಶೇಷವಾಗಿ ವಜ್ರ-ವೈಡೂರ್ಯ, ಮುತ್ತು ಹವಳ, ನವರತ್ನಗಳಿಂದ ಶೃಂಗರಿಸಲಾಗಿತ್ತು. ನಾನಾ ಬಗೆಯ ವಿಶೇಷ ಹೂಗಳಿಂದ ತೇಲುವ ದೇವಾಲಯವನ್ನು ಅಲಂಕೃತಗೊಳಿಸಲಾಗಿತ್ತು. ಉತ್ಸವ ಮೂರ್ತಿಯನ್ನು ಹೊತ್ತ ವಿದ್ಯುತ್ ದೀಪಾಲಂಕೃತ ತೇಲುವ ದೇವಾಲಯದಲ್ಲಿ ಶ್ರೀಯವರನ್ನು 3 ಪ್ರದಕ್ಷಿಣೆಯನ್ನು ಹಾಕಲಾಯಿತು.
ನದಿಯ ಎರಡೂ ದಡಯಲ್ಲಿ ನೆರದಿದ್ದ ಭಕ್ತರು ಈ ಮನೋಹರ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಂಡು ಕರತಾಡನ, ಜೈಕಾರಗಳನ್ನು ಹಾಕಿ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡು ಭಾವ ಪರವಶರಾಗಿ ಪುಳಕಿತರಾದರು.
ತೆಪೆÇ್ಪೀತ್ಸವದ ಅಂಗವಾಗಿ ಇಂದೂ ಸಹ ವಿವಿಧ ಸಂಘ ಸಂಸ್ಥೆಗಳವರು ಪ್ರಸಾದ ವಿನಿಯೋಗ ಮಾಡಿದರು. ಸಂಚಾರ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಂಡಿತು. ಸಂಚಾರ ವ್ಯವಸ್ಥೆ ನಿಯಂತ್ರಿಸಲು ಪೆÇಲೀಸರು ಹರಸಾಹಸ ಪಡಬೇಕಾಯಿತು. ತೆಪೆÇ್ಪೀತ್ಸವದ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೆÇಲೀಸ್ ಬಂಧೋಬಸ್ತ್ನ್ನು ನಿಯೋಜಿಸಲಾಗಿತ್ತು.
ಈ ಸಂಧರ್ಭದಲ್ಲಿ ದೇವಾಲಯದ ಇಒ ಜಗದೀಶ್, ಎಇಒ ಸತೀಶ್ ಉಪಸ್ಥಿತರಿದ್ದರು.