ಶ್ರೀಕಂಠೇಶ್ವರ ದೇವಾಲಯದ 31 ಹುಂಡಿ ಎಣಿಕೆ

ನಂಜನಗೂಡು, ಡಿ.27: ನಂಜುಂಡೇಶ್ವರನ ದೇವಾಲಯದಲ್ಲಿ 31 ಹುಂಡಿ ಎಣಿಕೆ ಕಾರ್ಯ ನಡೆಯಿತು ಇದರಲ್ಲಿ 1,98 ಕೋಟಿ ರು ಸಂಗ್ರಹವಾಗಿದೆ.
ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತಾದಿಗಳು ಸಂಖ್ಯೆ ಕಡಿಮೆ ಬಂದಿದ್ದರೂ ಕೂಡ ಕೋಟಿ ದಾಟಿದ ನಂಜುಂಡೇಶ್ವರ 31 ಹುಂಡಿಗಳಲ್ಲಿ ಹಣ ಸಂಗ್ರಹದ ಜೊತೆಗೆ 77 ಗ್ರಾಂ ಚಿನ್ನ ಐದು ಕೆಜಿ 700 ಬೆಳ್ಳಿ ಸಂಗ್ರಹವಾಗಿದೆ ಇದಲ್ಲದೆ ನಿಷೇಧಿತ ನೋಟುಗಳು ಕೂಡ ಪತ್ತೆಯಾಗಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ವೆಂಕಟೇಶ್ ಪ್ರಸಾದ್ ಬ್ಯಾಂಕ್ ಅಧಿಕಾರಿ ಹರ್ಷ ಮತ್ತು ಸ್ವಸಹಾಯ ಸಂಘದ ಗೆಳೆಯರು ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯ ನಡೆಸಿದರು.