ಶ್ರೀಕಂಠೇಶ್ವರ ದೇವಸ್ಥಾನ ಬಂದ್

ನಂಜನಗೂಡು:ಏ:17: ಶ್ರೀ ಶ್ರೀಕಂಠೇಶ್ವರ ದೇವಸ್ಥಾನ ಈ ದಿನದಿಂದ ಮುಂದಿನ ತಿಂಗಳು 15 ತಾರೀಖಿನವರೆಗೆ ಅಂದರೆ 30 ದಿನಗಳವರೆಗೆ ಶ್ರೀಕಂಠೇಶ್ವರ ದೇವಾಲಯ ಬಂದ್ ಮಾಡಲಾಗಿದೆ.
ಕೇಂದ್ರ ಪುರಾತತ್ವ ಇಲಾಖೆಯ ಆದೇಶದಂತೆ 16-4-2021ರಿಂದ 15-5-2021ರವರೆಗೆ ದೇವಸ್ಥಾನ ಬಂದ್ ಮಾಡ ಲಾಗಿದೆ ಆದ್ದರಿಂದ ದೇವ ಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ವನ್ನು ನಿಷೇಧಿಸಲಾಗಿದೆ
ಕರೋನವೈರಸ್ ಎರಡನೆಯ ಅಲೆ ಹೆಚ್ಚುತ್ತಿರುವುದರಿಂದ ಮುಂಜಾಗೃತಾ ಕ್ರಮವಾಗಿ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಭಾನುವಾರ ಸೋಮವಾರ ಹುಣ್ಣಿಮೆ ದಿನ ಮತ್ತು ರಜಾ ದಿನಗಳಲ್ಲಿ ದೇವಾಲಯಗಳಿಗೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರೋನವೈರಸ್ ಹರಡುವಿಕೆ ಹೆಚ್ಚಾಗಬಹುದು ಎಂಬ ದೃಷ್ಟಿಯಿಂದ ಕ್ರಮ ಕೈಗೊಂಡಿದ್ದಾರೆ