
ನಂಜನಗೂಡು: ಏ.12:- ಶ್ರೀಕಂಠೇಶ್ವರ ದೇವಾಲಯಕ್ಕೆ ಅಪಾರ ಭಕ್ತಾದಿಗಳು ಪ್ರತಿದಿನ ಬರುತ್ತಾರೆ ದೇವಸ್ಥಾನ ವ್ಯಾಪ್ತಿಗೆ ಸೇರಿದ ಆರ್ಯ ಭವನ್ ಹೋಟೆಲ್ ಸೇರಿದ ಪಿಟ್ ಗುಂಡಿ ತುಂಬಿಕೊಂಡು ಹಲವಾರು ತಿಂಗಳು ಕಳೆದರೂ ಕೂಡ ಸ್ವಚ್ಛತೆ ಮಾಡದೆ ಇರುವುದರಿಂದ ರಸ್ತೆ ತುಂಬಾ ಹರಿಯುತ್ತಿದೆ
ಭಕ್ತಾದಿಗಳು ಇದೇ ರಸ್ತೆಯಲ್ಲಿ ದರ್ಶನ ಪಡೆದು ಬರುತ್ತಾರೆ ಪ್ರತಿಯೊಬ್ಬರು ಮೂಗು ಮುಚ್ಚಿಕೊಂಡು ದುರ್ನಾಥ ತಡೆಯಲಾರದೆ ಇಡೀ ಶಾಪ ಹಾಕುತ್ತ ಹೋಗುತ್ತಿದ್ದಾರೆ.
ಪ್ರತಿ ದಿನ ದೇವಸ್ಥಾನದ ನೌಕರರು ಸ್ವಚ್ಛತೆ ಮಾಡುತ್ತಾರೆ ಮೇಸ್ತ್ರಿ ಕೂಡ ಇರುತ್ತಾರೆ ಇದನ್ನು ಪ್ರತಿದಿನ ನೋಡುತ್ತಾರೆ ಯಾರ ಗಮನಕೊ ತರುವುದಿಲ್ಲ ತಾವು ಸ್ವಚ್ಛತೆ ಮಾಡುವುದಿಲ್ಲ ಅಧಿಕಾರಿಗಳ ಗಮನಕ್ಕೂ ತರುವುದಿಲ್ಲ ಅಧಿಕಾರಿಗಳು ಕೂಡ ಒಂದು ದಿನವಾದರೂ ದೇವಸ್ಥಾನದ ಸುತ್ತ ಓಡಾಡಿ ಸ್ವಚ್ಛತಾ ಕಾರ್ಯ ಬಗ್ಗೆ ತಿಳಿದುಕೊಳ್ಳುವುದಿಲ್ಲ ಇವರಿಗೆ ಇಷ್ಟ ಬಂದ ರೀತಿ ಸ್ವಚ್ಛತೆ ಕಾರ್ಯ ನಡೆಸುತ್ತಿದ್ದಾರೆ.
ದೇವಸ್ಥಾನಕ್ಕೆ ಕೋಟಿಗಟ್ಟಲೆ ಆದಾಯವಿದ್ದರೂ ಕೂಡ ಮೂಲಭೂತದ ಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಕಪಿಲಾ ನದಿಯಲ್ಲಿ ಮಿಂದು ಭಕ್ತಾದಿಗಳು ದೇವರ ದರ್ಶನಕ್ಕೆ ಇದೇ ದಾರಿಯಲ್ಲಿ ಬರುತ್ತಾರೆ ಗಬ್ಬುನಾಯತ್ತಿರುವ ನೀರು ರಸ್ತೆಯಲ್ಲಿ ಇದನ್ನೇ ತುಳಿದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ ಇದನ್ನು ಕೂಡ ಅಲ್ಲಿನ ಸ್ವಚ್ಛತೆ ಮಾಡುವುದು ಆದರೆ ಬೇಕಾಬಿಟ್ಟಿ ಕೆಲಸ ಮಾಡಿ ಪ್ರತಿದಿನ ಕಾಲ ಕಳೆಯುತ್ತಿದ್ದಾರೆ ಎಂದು ಭಕ್ತಾದಿಗಳು ವಾಹನ ಪಾರ್ಕಿಂಗ್ ಹೋಗುವ ರಸ್ತೆಯಲ್ಲಿ ಗಬ್ಬುನರುತ್ತಿರುವ ನೀರು ತುಂಬಿಕೊಂಡು ಗುಂಡಿ ಸ್ವಚ್ಛತೆ ಮಾಡದೆ ಅದರ ಮೇಲೆ ಬ್ಯಾರಿಕೆಟ್ ಮುಚ್ಚಿ ಓಡಾಡಲು ಅಡಚಣೆ ಉಂಟು ಮಾಡಿದ್ದಾರೆ.
ದೇವಸ್ಥಾನಕ್ಕೆ ಕುಟುಂಬ ಸಮೇತ ಬರುವುದರಿಂದ ಚಿಕ್ಕ ಚಿಕ್ಕ ಮಕ್ಕಳು ಕೂಡ ಬರುತ್ತಾರೆ ಏನಾದರೂ ದಾರಿತಪ್ಪಿ, ತುಂಬಿರುವ ಹೋಟೆಲ್ ಪಿಟ್ ಗುಂಡಿಗೆ ಬಿದ್ದು ಹೆಚ್ಚಿನ ಅನಾಹುತ ಉಂಟಾಗಬಹುದು ಇದನ್ನು ತಡೆಯುವವರು ಯಾರು ಎಂಬುದ ಪ್ರಶ್ನೆಯಾಗಿದೆ.
ಆರ್ಯಭವನ್ ಹೋಟೆಲ್ ಮಾಲೀಕರು ತಮ್ಮ ಹೋಟೆಲ್ ಪಿಟ್ ಗುಂಡಿಯನ್ನು ಸ್ವಚ್ಛತೆ ಮಾಡದೆ ಯಾವ ಅಧಿಕಾರಿಗಳಿಗೂ ಹೆದರದೆ ದೇವಸ್ಥಾನದ ಆವರಣದಲ್ಲಿ ಬಿಟ್ಟಿರುವುದು ಭಕ್ತಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಂದಾದರೂ ಭಕ್ತಾದಿಗಳಿಗೆ ಅನಾಹುತ ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆ ಮಾಡುವ ನೌಕರರು ಹೋಟೆಲ್ ಮಾಲೀಕರು ಗುರಿಯಾಗಬಹುದು ಆದ್ದರಿಂದ ತಕ್ಷಣ ಎಚ್ಚೆತ್ತುಕೊಂಡು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬೇಕು ಎಂದು ಭಕ್ತಾದಿಗಳು ಎಚ್ಚರಿಸಿದ್ದಾರೆ ಇಲ್ಲದಿದ್ದರೆ ಕಚೇರಿಯ ಮುಂದೆ ಪ್ರತಿಭಟನೆ ಇಳಿಯಬೇಕಾಗುತ್ತದೆ ಎಂದು ಹೇಳಿದ್ದಾರೆ.