ಶ್ರೀಕಂಠೇಶ್ವರನ ಭಕ್ತಾಧಿಗಳಿಂದ ಹಣ ವಸೂಲಿ

ನಂಜನಗೂಡು: ಜು.13:- ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಶೌಚಾಲಯದಲ್ಲಿ ಕಪಿಲಾ ನದಿಯಲ್ಲಿ ನೀರು ತುಂಬಿ ಅದನ್ನೇ ಅಸ್ತ್ರವಾಗಿಟ್ಟುಕೊಂಡು ಭಕ್ತಾದಿಗಳ ಹತ್ತಿರ ಒಂದು ಚಿಕ್ಕ ಬಕೆಟ್ ಬಿಸಿ ನೀರಿಗೆ 30 ರೂಪಾಯಿ ಒಂದು ಚಿಕ್ಕ ಬಕೆಟ್ ತಣ್ಣೀರಿಗೆ .5 ರೂಪಾಯಿ ಮತ್ತು ಐದರಿಂದ ಹತ್ತು ಜನ ಲೈನಿಗೆ ನಿಲ್ಲಿಸಿ ಪ್ಲಾಸ್ಟಿಕ್ ಪೈಪಿನಲ್ಲಿ ನೀರನ್ನು ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ.
ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆಂದು ಶಾಪ ಹಾಕಿದ ಭಕ್ತಾದಿಗಳು ಹೇಳುವುದೇನೆಂದರೆ ತುಂಬಿ ಹರಿಯುತ್ತಿರುವ ಕಪಿಲಾ ನದಿ ಇದ್ದರೂ ಕೂಡ ದೇವಸ್ಥಾನಕ್ಕೆ ಸೇರಿದ ನೀರಿನ ಟ್ಯಾಂಕ ಇಂದ ನೀರನ್ನು ಕೊಡುತ್ತಿದ್ದಾರೆ ಈ ನೀರಿಗೂ ಹಣ ನೀಡಬೇಕೆ? ಎನ್ನುತ್ತಿದ್ದಾರೆ.
ಸತತ ಮಳೆಯಿಂದ ಕಪಿಲಾ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಯಾರೂ ಕೂಡ ಕಪಿಲಾ ನದಿ ತಿಳಿಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಂದು ಬಸ್ ಮಾಡಲಾಗಿದೆ.
ಇಂದು ಹುಣ್ಣಿಮೆ ಆದ್ದರಿಂದ ಶ್ರೀಕಂಠೇಶ್ವರ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದಿದ್ದರಿಂದ ಸ್ಥಾನಕ್ಕೆ ನದಿಗೆ ಬಿಡಲಾಗುತ್ತಿಲ್ಲ ಆದರೂ ಕೂಡ ನದಿ ಆಸು ಪಾಸಿನಲ್ಲಿ ಭಕ್ತಾದಿಗಳು ಸ್ನಾನ ಮಾಡುತ್ತಿದ್ದಾರೆ.
ಇದರ ಜೊತೆಗೆ ದೇವಸ್ಥಾನದ ವತಿಯಿಂದ ಗಿರಿಜಾ ಕಲ್ಯಾಣ ಮಂಟಪ ದಾರ್ಮೆಟ್ರಿ ಪಕ್ಕ ಮತ್ತು ಡಾರ್ಬೇಟರಿಯಲ್ಲಿ ಭಕ್ತಾದಿಗಳಿಗೆ ಸ್ನಾನದ ವ್ಯವಸ್ಥೆ ಮಾಡಲಾಗಿದೆ ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಇರುವುದರಿಂದ ಸ್ನಾನಕ್ಕೆ ತೊಂದರೆಯಾಗಿದೆ ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ದೇವಸ್ಥಾನದ ವ್ಯಾಪ್ತಿಗೆ ಸೇರಿದ ಶೌಚಾಲಯದಲ್ಲಿ ಒಂದು ಬಕೆಟ್ ಬಿಸಿ ನೀರು ನೀಡಿ 30 ವಸೂಲಿ ಮಾಡುತ್ತಿದ್ದಾರೆ ಮತ್ತು ಪ್ಲಾಸ್ಟಿಕ್ ಪೈಪಿನಲ್ಲಿ ತಲೆಗೆ ನೀರನ್ನು ಹಾಕಿ 5 ರೂಪಾಯಿ ವಸೂಲಿ ಮಾಡುತ್ತಿದ್ದಾರೆ
ದೇವಸ್ಥಾನಕ್ಕೆ ಸೇರಿದ ವ್ಯಾಪ್ತಿಯಲ್ಲಿ ಈ ರೀತಿ ದಂಧೆ ಕಾಸು ಕೊಟ್ಟರೆ ನೀರು ಭಕ್ತಾದಿಗಳ ಗೋಳು ಹೇಳತಿರದು.
ಪೆÇಲೀಸರ ಕಣ್ ತಪ್ಪಿಸಿ ನದಿಯಲ್ಲಿ ಸ್ಥಾನ
ನಂಜನಗೂಡು ಕಪಿಲಾ ನದಿಗೆ ಪೆÇಲೀಸ್ ಸರ್ಪ ಕಾವಲು ಇದ್ದರೂ ಮೈದುಂಬಿ ಹರಿಯುತ್ತಿರುವ ಕಪಿಲಾ ನದಿಗೆ ಭಕ್ತಾದಿಗಳು ಸ್ನಾನ ಮಾಡುತಿರುವ ದೃಶ್ಯ ಕಂಡು ಬಂದಿತು. ನದಿಯ ದಡದ ಹತ್ತಿರ ಹೋಗಬಾರದು ಸ್ನಾನ ಮಾಡಬಾರದು ಎಂದು ದೇವಸ್ಥಾನದ ವತಿಯಿಂದ ಆದೇಶ ಮಾಡಿದ್ದರು ಅವರ ಮಾತಿಗೆ ಕಿವುಗೊಡದ ಭಕ್ತಾದಿಗಳು ಪೆÇಲೀಸ್‍ರ ಕಣ್ಣು ತಪ್ಪಿಸಿ ನದಿಯಲ್ಲಿ ಸ್ಥಾನ ಮಾಡಲು ಮುಂದಾಗಿದ್ದಾರೆ.