ಶ್ರೀಉಳ್ಳಾಲ್ತಿ ಕ್ಷೇತ್ರದಕಾಣಿಕೆ ಡಬ್ಬಿ ಕಳವು:


ತಡರಾತ್ರಿ ನಡೆದ ಘಟನೆ
ಬಂಟ್ವಾಳ, ನ.೯- ವೀರಕಂಬ ಗ್ರಾಮದ ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ, ವಿಟ್ಲ ಕಲ್ಲಡ್ಕ ರಸ್ತೆ ಬದಿಯಲ್ಲಿರುವ ಕಾಣಿಕೆ ಡಬ್ಬಿ ಕಳವಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ.
ಕೆಲಿಂಜ ಕ್ಷೇತ್ರಕ್ಕೆ ಬಹಳ ಪುರಾತನ ಇತಿಹಾಸವಿದ್ದು ಇಲ್ಲಿ ವರ್ಷ ಪ್ರತಿ ನಡೆಯುವ ಮೆಚ್ಚಿ ಜಾತ್ರೆ ವಿಶೇಷವಾಗಿದೆ. ಬೇರೆ ಬೇರೆ ಊರಿನ ಸಾವಿರಾರು ಭಕ್ತರು ಮೆಚ್ಚಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಈ ಮಾರ್ಗದಿಂದ ಹಾದು ಹೋಗುವ ಅನೇಕ ಭಕ್ತರು ಕ್ಷೇತ್ರದ ಎದುರು ತಮ್ಮ ವಾಹನವನ್ನು ನಿಲ್ಲಿಸಿ ಕಾಣಿಕೆ ಹಾಕಿ ಹೋಗುತ್ತಾರೆ. ನಿನ್ನೆ ರಾತ್ರಿ ಯಾರೋ ಖದೀಮರು ಕಾಣಿಕೆ ಹುಂಡಿಯನ್ನು ಎಗರಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.