ಶ್ರೀಅಂಬಾ ಭವಾನಿ ದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ

ಬೀದರ, ಜು. 04ಃ ಶಿವನಗರ ಬಸವೇಶ್ವರ ಬಡಾವಣೆಯಲ್ಲಿ ಇಂದು ಶ್ರೀ ಅಂಬಾ ಭವಾನಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭನೆಯಿಂದ ನಡದೆಯಿತು.

ಇಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಚಂಡಿ ಹೋಮ, ರುದ್ರಾಭೀಷೇಕ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಗಳು ನಡೆದವು.

ಮಹಾಪ್ರಸಾದ ದಾಸೋಹಿಗಳಾದ ಡಾ. ಅನೀಲಕುಮಾರ ತಳವಾಡೆ ಮತ್ತು ಸಿದ್ದು ಆನಂದೆ ಅವರು ನೇತೃತ್ವದಲ್ಲಿ ಸಾವಿರಾರು ಅಂಬಾ ಭವಾನಿ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶಿವನಗರದ ಜೈ ಭವಾನಿ ಮಾತಾ ಮತ್ತು ಮಹಾತ್ಮ ಬಸವೇಶ್ವರ ಕಾಲೋನಿಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ರಾಜಕುಮಾರ ಲದ್ದೆ, ಉಪಾಧ್ಯಕ್ಷರಾದ ಎಸ್.ಎಸ್. ಬಿರಾದಾರ, ಕಾರ್ಯದರ್ಶಿ ಮಹಾದೇವ ಖರಾಬೆ, ಖಜಾಂಚಿ ಸಂತೋಷಕುಮಾರ ಲದ್ದೆ, ಸದಸ್ಯರಾದ ಶಿವರಾಜ ರಟಕಲೆ, ಗುರುರಾಜ ಮೂಲಗೆ, ವರ್ದಿಶ ಜಾಂತಿಕರ, ಲಕ್ಷ್ಮೀಬಾಯಿ ಪಾಟೀಲ, ಶಿವಾನಂದ ಆಲೂರೆ, ಮಹಾದೇವ ಮಹಾಲಿಂಗ, ಸುಧೀರ ಕುಲಕರ್ಣಿ, ಪ್ರಶಾಂತ ಪಾಟೀಲ, ಗುರುನಾಥ ಅಕ್ಕಣ್ಣ, ಉಮೇಶ ಭರಶೆಟ್ಟಿ, ಸಿದ್ದು ಎಸ್. ಆನಂದೆ, ರಾಮಲಿಂಗ ಹಣಮಶೆಟ್ಟಿ, ಡಾ. ವಿಶ್ವನಾಥ ಕಿವುಡೆ, ನವೀನಕುಮಾರ ಗೌರೆ, ಸತೀಶ ಮಂಠಾಳೆ, ಸಿದ್ದರಾಜ ಪಾಟೀಲ, ರಾಜಕುಮಾರ ಕಾದೆನೋರ, ರೇವಯ್ಯಾ ಹಿರೇಮಠ ಅವರು ಸೇರಿದಂತೆ ಮಹಿಳೆಯರು, ಮಕ್ಕಳು, ಸಾವಿರಾರು ಭಕ್ತರು ಇದ್ದರು.