ಸಂಜೆವಾಣಿ ವಾರ್ತೆ
ಯಲಬುರ್ಗಾ, ಜು.14: ಗಂಗಾವತಿ ತಾಲೂಕಿನ ಆನೆಗೊಂದಿ ಪರಿಸರ ದಲ್ಲಿ ಮಾದಕ ಡ್ರಗ್ಸ್ ಹಾಗೂ ಇತರೆ ಅಕ್ರಮ ಚಟುವಟಿಕೆ ನಿಯಂತ್ರಣ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಿದ ಯಲಬುರ್ಗಾ ಶಾಸಕ ರಾಯರೆಡ್ಡಿ ಅವರಿಗೆ ಮನಸಿಗೆ ನೋವಾಗುವಂತೆ ವತಿ೯ಸಿರುವ ಘಟನೆ ಖಂಡನಾರ್ಹ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಸಂಗಮೇಶ್ ಗುತ್ತಿ ತಿಳಿಸಿದರು. ಅವರು ಗುರುವಾರ ಬ್ಲಾಕ್ ಕಾಂಗ್ರೆಸ್ ಕಾಯಾ೯ಲಯದಲ್ಲಿಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತುವ ಕೆಲಸ ಮಾಡಿದರೇ ಗಂಗಾವತಿ ಭಾಗದ ಎಚ್.ಆರ್.ಶ್ರೀನಾಥ್ ಹಾಗೂ ಮತ್ತಿತರ ಕೆಲವು ಮುಖಂಡರು ರಾಯರೆಡ್ಡಿ ವಿರುದ್ದ ತಿರುಗಿ ಬಿದ್ದಿರುವುದು ಅವರ ರಾಜಕೀಯ ಅಪ್ರಬುದ್ಧತೇ ಎದ್ದು ಕಾಣುತ್ತಿದೆ, ರಾಯರೆಡ್ಡಿ ಅವರು ಸಂಸದರಾಗಿ, ಸಚಿವರಾಗಿ ನಾಡಿನ ಸವ೯ತೋಮುಖ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಕಾನೂನು ಪದವೀಧರರಾಗಿ ಎಲ್ಲ ಸಾಧಕ ಬಾಧಕ ಅರಿತು ನೇರ ನಿಷ್ಟುರತೇಯಿಂದ ಮಾತನಾಡುವ ಏಕೈಕ ಡೈನಮಿಕ್ ಲೀಡರ್ ಅಂದ್ರೆ ಅದು ರಾಯರೆಡ್ಡಿ ಅವರು ಮಾತ್ರ. ಇಂಥ ನಾಯಕರ ಮಾತನ್ನು ಸಹಿಸಿ ಕೊಳ್ಳದ ಏಚ್.ಆರ್ ಶ್ರೀನಾಥ್ ಎಂಬ ಅವಕಾಶ ವಾದಿ ಲೀಡರ್ ನಮ್ಮ ಕ್ಷೇತ್ರದ ಅಭಿವೃದ್ದಿ ಹರಿಗಾರ್ ರಾಯರೆಡ್ಡಿ ಅವರ ಬಗ್ಗೆ ಹಗುರ ವಾಗಿ ಮಾತನಾಡಿದ್ದು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಇದೆ ವಿಷಯ ಕುರಿತು ಪ್ರಮೋದ ಮುತಾಲಿಕ್ ಅವರು ೭ ತಿಂಗಳ ಹಿಂದೆಯೇ ಆನೆಗೊಂದಿ ಮತ್ತಿತರ ಭಾಗದಲ್ಲಿ ಗಾಂಜಾ ಡ್ರಗ್ಸ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಆಗ ಇಲ್ಲದ ಆಕ್ಷೇಪ ಈಗ ಏಕೆ ಬಂತು ಎಂದು ಪ್ರಶ್ನಿಸಿದರು. ಹಲವಾರು ರೆಸಾಟ್೯ ಗಳ ಪೈಕಿ ಆನೆಗೊಂದಿ ಯಲ್ಲಿ ಶ್ರೀನಾಥ್ ಅವರ ರೇಸಾಟ್೯ ಇದೆ. ಅದಕ್ಕಾಗಿ ರಾಯರೆಡ್ಡಿ ಅವರ ಬಗ್ಗೆ ಶ್ರೀನಾಥ್ ಉರಿದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಜಿ.ಪಂ.ಮಾಜಿ ಸದಸ್ಯರಾದ ಕೆರಿ ಬಸಪ್ಪ ನಿಡಗುಂದಿ,ಈರಪ್ಪ ಕುಡಗುಂಟಿ,ಡಾ. ಶಿವನಗೌಡ ದಾನರೆಡ್ಡಿ, ಆನಂದ ಉಳ್ಳಾಗಡ್ಡಿ, ಹಂಪಯ್ಯ ಹಿರೇಮಠ್,ಅಲ್ಲಾಸಾಬ್ ದಮ್ಮೂರು, ರೇವಣಪ್ಪ ಹೀರೆ ಕುರುಬರ, ಗಂಗಮ್ಮ ಬಂಡಿ, ಮಂಜುನಾಥ್ ಯಡಿಯಾಪೂರ, ಗವಿ ಶಾಲೂಡಿ, ಹುಲಗಪ್ಪ ಬಂಡಿ ವಡ್ಡರ,ಎಂ. ಎಫ್.ನದಾಫ ಮೊದಲಾದವರು ಇದ್ದರು.