ಶ್ರಾ. ಮಾಸದ ಪ್ರವಚನ ಸಮಾರೋಪ ಸಚಿವರು ಶಾಸಕರಿಗೆ ಸನ್ಮಾನ

ಗುರುಮಠಕಲ್:ಸೆ.20: ಗಡಿನಾಡಿನ ಭಾಗದಲ್ಲಿರುವ ಸಂಸ್ಥಾನ ಖಾಸಮಠ ಗುರುಮಠಕಲ್. ಹೆಸರೆ ಸೂಚಿಸುವ ಹಾಗೆ ಗುರುವು ಮುಟ್ಟಿದ ಕಲ್ಲು- ಗುರುಮಠಕಲ ಎಂದೇ ಪ್ರಸಿದ್ಧಿ ಗೊಂಡಿರುವ ತನ್ನದೇ ಆದ ವಿಶಿಷ್ಟ ಹೆಸರನ್ನು ಪಡೆದುಕೊಂಡಿರುವ ಸಂಸ್ಥಾನ ಖಾಸಮಠ. 12 ನೇ ಶತಮಾನದಲ್ಲಿ ಶರಣರು ಮಾನವನ ಘನತೆಯನ್ನು ಸ್ವಾತಂತ್ರವನ್ನು ಎತ್ತಿ ಹಿಡಿದರು. ಜಾತಿ ಬೇಧವನ್ನು ಕಿತ್ತೊಗೆದರು. ಅಪ್ಪ ಬಸವಣ್ಣ ನವರು ತಮ್ಮ ವಚನದಲ್ಲಿ ಹೇಳಿರುವಂತೆ ಎನ್ನ ದೇಹವೇ ದೇವಾಲಯ. ಆತ್ಮವೇ ಪರಮಾತ್ಮ ಅನ್ನುವ ಹಾಗೆ ದೇಹವನ್ನೇ ದೇಗುಲಮಾಡಿ ಘಟಗಳನ್ನೇ ಮಠಗಳನ್ನಾಗಿ ಮಾಡಿ. ಅರಿವನ್ನೆ ಗುರುವನ್ನಾಗಿ ಮಾಡಿ ಸಮಾಜವನ್ನೇ ಜಂಗಮವನ್ನಾಗಿ ಮಾಡಿದರು ಶಿವಶರಣರು. ಅಂತಹ ಪರಂಪರೆಯಲ್ಲಿ ಶರಣಧರ್ಮ ದಾಸೋಹ ಶಿಕ್ಷಣ ಜೊತೆ ಜೊತೆಗೆ ಕಾಯಕ ನಿಷ್ಟೆಗೆ ತನ್ನದೆ ಆದ ಕೊಡುಗೆ ನೀಡುತ್ತ ಬರುತ್ತಿದ್ದು. ಈ ವರ್ಷವು ಕೂಡ ಸಂಸ್ಥಾನ ಖಾಸಮಠ ಪರಂಪರ ಪೀಠಾಧಿಪತಿಗಳು ಈ ಭಾಗದ ನಡೆದಾಡುವ ದೇವರು ಅಪ್ಪ ಬಸವಣ್ಣ ನವರ ಪ್ರತಿರೂಪವಾಗಿ ತೋರುವ ಶ್ರೀ ಮನ್ ನಿರಂಜನ ಪ್ರಣವ್ ಸ್ವರೂಪಿ ಶಾಂತವೀರ ಗುರು ಮುರುಘರಾಜೇಂದ್ರ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಖಾಸ ಮಠದ ಸದ್ಭಕ್ತರ ಸಮ್ಮುಖದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಪಯರ್ಂತ ನಡೆದಿರುವ ಶರಣರ ಜೀವನ ದರ್ಶನ ವೆಂಬುವ ಶೀರ್ಷಿಕೆಯಡಿ ಶಿವಶರಣರ ವಚನಗಳ ಸಾರವನ್ನು ಪ್ರತಿ ದಿನ ಸಾಯಂಕಾಲ 6-30 ರಿಂದ 7-30 ರವರೆಗೆ ಸತತವಾಗಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ತಾಲೂಕು ಘಟಕ ಉಪಾಧ್ಯಕ್ಷ ರಾದ ಕನ್ನಯ್ಯ ಪಡಿಗೆ ಹಾಗೂ ಸಂಗಡಿಗರ ಸಂಗೀತ ಕಲಾ ಬಳಗದವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಬಹು ಯಶಸ್ವಿಯಾಗಿ ಜರುಗಿತು. ಈ ವೇಳೆ ಪ್ರವಚನ ಕಾರರಾಗಿ ಆಗಮಿಸಿದ ಬೆಳಗಾವಿ ಜಿಲ್ಲಾ ಮಹಾಲಿಂಗೇಶ್ವರ ಮಠ ಶಿರಸಂಗಿ ಪೂಜ್ಯ ಶ್ರೀ ಬಸವಮಹಾಂತ ಮಹಾಸ್ವಾಮಿಗಳು ಶರಣರ ಜೀವನ ದರ್ಶನ ವೆಂಬುವ ಶೀರ್ಷಿಕೆಯಡಿ ಶಿವಶರಣರ ವಚನಗಳ ತಾತ್ಪರ್ಯ ಮತ್ತು ಮಾನವರು ಬುದ್ಧಿ ಜೀವಿಗಳಾದ ಮಾನವರು ಜೀವನದಲ್ಲಿ ಯಾವರೀತಿ ಯಾಗಿ ಅಳವಡಿಸಿ ಕೊಳ್ಳಬೇಕು ಎನ್ನುವ ಉದಾಹರಣೆಗಳ ಮೂಲಕ ಸದ್ಭಕ್ತರಿಗೆ ಮನಮುಟ್ಟುವಂತೆ ವಚನದ ಅಮೃತ ಸಾರವನ್ನು ತಿಳಿಸಿದರು. ಈ ಕಾರ್ಯಕ್ರಮದ ನೇತೃತ್ವ ವಹಿಸಿ ಸದ್ಭಕ್ತರಿಗೆ ಆರ್ಶೀವಚನ ನುಡಿಗಳನ್ನು ನುಡಿದ ಪಶ್ಚಿಮಾದ್ರಿ ವಿರಕ್ತಮಠ ನಿರಡಗುಂಬ ಪೂಜ್ಯ ಶ್ರೀ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ಹನ್ನೆರಡನೇ ಶತಮಾನದಲ್ಲಿ ಶರಣರು ಅವರೇನು ಸಾನ್ಯಸಿಗಳಾಗಿರಲಿಲ್ಲ ಮಹಾರಾಜರೆಂದೆನಿಸಿ ಕೊಂಡವರು ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ಮಾಡುತ್ತ. ಮುಕ್ತಿ ಪಡೆಯಲೆಂದು ಗುರುಬಸವಣ್ಣ ನವರು ಜಗತ್ತಿಗೆ ವಿಶೇಷ ವಾಗಿ ಸಂಸಾರಿಗಳಿಗಾಗಿ ನೀಡಿರುವ ಕುಟುಂಬಸ್ಥರ ಧರ್ಮ ಇದುವೇ ಬಸವ ಧರ್ಮ ಶರಣಧರ್ಮವನ್ನು ಪಾಲಿಸಿದ್ದಾರೆ. ನೆರಡಗುಂಬದ ಪರಮಪೂಜ್ಯ ಶ್ರೀಗಳು ಸಿದ್ದಲಿಂಗ ಸ್ವಾಮೀಜಿಗಳು ಮತ್ತು ಖಾಸಮಠದ ಹಿರಿಯ ಶ್ರೀಗಳಾದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಅವರ ತಪ್ಪಿಸಿನ ಫಲವಾಗಿ ಇಂದು ಉಭಯ ಶ್ರೀಗಳ ಮಠಗಳು ಯಾವುದೇ ರೀತಿಯ ಜಾತಿಯ ಭೇದ ಭಾವ ವಿಲ್ಲದೆ ಶರಣರ ಮಾರ್ಗ ದಂತೆ ಭಕ್ತರ ಮನಸ್ಸನ್ನು ಕಟ್ಟುತ್ತಿದ್ದಾರೆ ಎಂದು ಹೇಳಿದರು. ಇಂತಹ ಭವ್ಯವಾದ ಸಂಸ್ಥಾನ ಖಾಸಮಠ ಆವರಣದಲ್ಲಿ ಸದ್ಭಕ್ತರ ಸಮ್ಮುಖದಲ್ಲಿ ಕರಿಬಸವರಾಜ್ ಕೆ.ಸಜ್ಜನ್ ಶಿಕ್ಷಕರು ರಚಿಸಿರುವ ಗುಬ್ಬಿಯ ಗೂಡಿನ ಬೆರಗು (ಕವನ ಸಂಕಲನ) ಕೃತಿ ಲೋಕಾರ್ಪಣೆ ಗೊಂಡಿತು ಹಿರಿಯ ಸಾಹಿತಿ ಗಳು ಸೇಡಂ ಲಿಂಗಾರೆಡ್ಡಿ ಶೇರಿ ಕವನಸಂಕಲನ ಕೃತಿಯ ಬಗ್ಗೆ ಪರಿಚಯ ಮಾಡಿಕೊಟ್ಟರು.ಶಾಸಕರು ಯಾದಗಿರಿ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಗೌರವ ಸನ್ಮಾನ ಸ್ವೀಕರಿಸಿ ಕೊಂಡು ಮಾತನಾಡಿದರು.ಶಹಾಪೂರ ಪಕಿರೇಶ್ವರ ಮಠ ಪೂಜ್ಯ ಶ್ರೀ ಗುರುಪಾದ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥಾನ ಖಾಸಮಠ ಗುರುಮಠಕಲ್ ಪರಂಪರ ಪೀಠಾಧಿಪತಿಗಳು ಗಡಿನಾಡು ಬಾಗದ ನಡೆದಾಡುವ ದೇವರು ಅಪ್ಪ ಬಸವಣ್ಣ ನವರ ಪ್ರತಿರೂಪವಾಗಿ ತೋರುವ ಶ್ರೀ ಮನ್ ನಿರಂಜನ ಪ್ರಣವ್ ಸ್ವರೂಪಿ ಶಾಂತವೀರ ಗುರು ಮುರುಘರಾಜೇಂದ್ರ ಮಹಾ ಸ್ವಾಮಿಗಳು ಆರ್ಶೀವಚನ ನುಡಿಗಳನ್ನು ನೀಡುತ್ತ ಖಾಸಮಠದ ಪರಂಪರೆಯ ಬಗ್ಗೆ ಸತತವಾಗಿ ಒಂದು ತಿಂಗಳ ಪಯರ್ಂತ ನಡೆದ ಶರಣರ ಜೀವನ ದರ್ಶನ ಬಗ್ಗೆ ಶರಣರು ನಡೆ ನುಡಿ ಆಚಾರ ವಿಚಾರಗಳ ಬಗ್ಗೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಮತಿ ಅನ್ನಪೂರ್ಣಮ್ಮ ನರಸಿರೆಡ್ಡಿ ಗಡ್ಡೆಸೂಗೂರು ಗುರುಮಠಕಲ್ ಅವರು ಇದ್ದರೆ ಇರಬೇಕು ಇಂತಹ ಪುಣ್ಯ ದಂಪತಿಗಳು ಕಾರ್ಯಕ್ರಮದ ಅಧ್ಯಕ್ಷರು ಅಂತಹ ಆರ್ಶಿವಾದಿಸಿದರು ಪುಣ್ಯ ದಂಪತಿಗಳಿಗೆ ಇದ್ದರೆ ಇಂತಹ ಕಾರ್ಯಕ್ರಮಗಳು ಬಹು ಸುಂದರವಾಗಿ ಸದ್ಭಕ್ತರ ಸಮ್ಮುಖದಲ್ಲಿ ನಡೆಯುತ್ತವೆ ಮತ್ತು ಒಂದು ತಿಂಗಳ ಪಯರ್ಂತ ಮುಂಜಾನೆಯ ಸಮಯದಲ್ಲಿ ಭಕ್ತರ ಮನೆಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಪ್ರತಿದಿನವೂ ಸದ್ಭಕ್ತರ ಮನೆಯಲ್ಲಿ ಜರುಗಿತು ಅಂತಹ ಸದ್ಭಕ್ತರಿಗು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಪ್ರತಿ ಯೊಬ್ಬ ಶರಣು ಶರಣಿಯರ ಜಂಗಮ ಮೂರ್ತಿಗಳ ಹೆಸರನ್ನು ತೆಗೆದುಕೊಂಡು ಎಲ್ಲಾ ಸದ್ಭಕ್ತರಿಗೂ ಶರಣು ಶರಣಾರ್ಥಿಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಗುಬ್ಬಿಯ ಗೂಡಿನ ಬೆರಗು(ಕವನ ಸಂಕಲನ) ಕೃತಿಯ ಲೇಖಕರು ಶ್ರೀ ಮತಿ ಉಷಾ ಬಿ ವಿ ಸಜ್ಜನ್ (ಪೆÇೀಲಿಸ್ ಇಲಾಖೆ) ಕರಿಬಸವರಾಜ್ ಕೆ. ಸಜ್ಜನ್ ಶಿಕ್ಷಕರು ಹಾಗೂ ಅವರ ಸಮಸ್ತ ಕುಟುಂಬದ ಪರಿವಾರದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು.ನಿವೃತ್ತ ಮುಖ್ಯ ಗುರುಗಳು ಮುರುಘಯ್ಯ ವಸ್ತ್ರದ್. ಯಾನಗುಂದಿ ಆಶ್ರಮದ ನಾಗಮ್ಮ ವಸ್ತ್ರದ. ಪುರಸಭೆ ಮುಖ್ಯಾಧಿಕಾರಿ ಶ್ರೀ ಮತಿ ಭಾರತಿ ಎಸ್ ದಂಡೋತಿ.ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರು ನಾಗಭೂಷಣ ಅವುಂಟಿ. ವೀರಣ್ಣ ಬೇಲಿ.ಎ ಪಿ ಎಂ ಸಿ ಯಾದಗಿರಿ ಮಾಜಿ ಉಪಾಧ್ಯಕ್ಷ ರಘುನಾಥ ರೆಡ್ಡಿ ಪಾಟೀಲ್ ನಜರಪೂರ. ಮಾಜಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ. ಅನಂತಪ್ಪ. ಹಾಗೂ ಪಟ್ಟಣದ ಸುತ್ತಮುತ್ತ ಹಳ್ಳಿಗಳ ಶರಣು ಬಂದುಗಳು ಸೇರಿದಂತೆ ಶ್ರಾವಣ ಮಾಸಾಚರಣೆಯ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತದನಂತರ ಮಹಾ ಪ್ರಸಾದ ಸ್ವೀಕರಿಸಿ ಶರಣರ ಕೃಪೆಗೆ ಪಾತ್ರರಾದರು.