ಶ್ರಾವಣ ಸಮಾರೋಪ: ಭಜನೆ ಸಪ್ತಾಹ

ಚಿಂಚೋಳಿ,ಸೆ.12- ಇಲ್ಲಿನ ಶ್ರೀ ಸದ್ಗುರು ಮಹಾಂತೇಶ್ವರ ಮಠದಲ್ಲಿ ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಹಮ್ಮಿಕೊಂಡ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಹಿನ್ನಲೆಯಲ್ಲಿ ಏಳು ದಿವಸಗಳ ಸತತವಾಗಿ ಭಜನೆಯನ್ನು ನಡೆಸಲಾಗುತ್ತಿದ್ದು, ಚಿಂಚೋಳಿ ವಿವಿಧ ಭಜನಾ ಮಂಡಳಿ ವತಿಯಿಂದ ಭಜನೆಯಲ್ಲಿ ಭಾಗವಹಿಸಿವೆ.
ಮಠದಲ್ಲಿ ಏಳು ದಿನಗಳ ಕಾಲ ನಿತ್ಯ ಅನ್ನ ದಾಸೋಹ ಕೂಡ ದಿನದ 24 ಗಂಟೆ ವರೆಗೂ ಪ್ರಸಾದ ಸೇವೆ ಇರಲೆಂದು ಎಂದು ಮಹಾಂತೇಶ್ವರ ಮಠದ ಆಡಳಿತ ಮಂಡಳಿ ವ್ಯವಸ್ಥಾಪಕರಾದ ಸಂಗಪ್ಪ ಮಾಸ್ಟರ್ ಪಲಮೂರ, ಶಾಂತವೀರಯ್ಯ ಸುಂಕದ, ಶಂಕರ ಅಲ್ಲಾಪುರ್, ಸೋಮಯ್ಯ ಸ್ವಾಮಿ ಮಠಪತಿ, ಸಿದ್ದರಾಮಪ್ಪ ಖಡಗದ, ನಾಗೇಶ ಭದ್ರಶೆಟ್ಟಿ, ನಾಗರಾಜ ಮಲಕೂಡ, ತಿಳಿಸಿದ್ದಾರೆ.