ಶ್ರಾವಣ ಸಂಜೆ ಕಾರ್ಯಕ್ರಮ

ಲಕ್ಷ್ಮೇಶ್ವರ,ಜು.31: ಭಾರತ ಭವ್ಯ ಸಂಸ್ಕøತಿ ಸಂಪ್ರದಾಯಗಳ ತವರೂರಾಗಿದ್ದು ಇಲ್ಲಿ ಬದುಕಿ ಹೋದ ಮಹಾತ್ಮರು, ಪುಣ್ಯಪುರುಷರು, ಶರಣರು, ಸಂತರು, ಕಾಯಕ ಯೋಗಿಗಳು ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಶ್ರಾವಣ ಮಾಸದ ಪುಣ್ಯಕಾಲದಲ್ಲಿ ಪ್ರತಿಯೊಬ್ಬರೂ ಪುರಾಣ, ಪುಣ್ಯಕಥೆ ಆಲಿಸುವ ಮೂಲಕ ಸನ್ಮಾರ್ಗ, ಧರ್ಮಾಚರಣೆ, ಸತ್ಸಂಗಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೂವಿನಶಿಗ್ಲಿಯ ಶ್ರೀ ಚನ್ನವೀರಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶಿದ್ದೇಶ್ವರ ಸತ್ಸಂಗ ಬಳಗ, ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ, ಲಕ್ಷ್ಮೇಶ್ವರ ತಾಲೂಕ ಶರಣ ಸಾಹಿತ್ಯ ಪರಿಷತ್, ಲಕ್ಷ್ಮೇಶ್ವರ ತಾಲೂಕ ಕದಳಿ ಮಹಿಳಾ ವೇದಿಕೆ, ರಾಜ ರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕøತಿ ವೇದಿಕೆ ಹಾಗೂ ಅಕ್ಕಾಮಹಾದೇವಿ ಬಳಗ, ಪ್ರೇಮಕ್ಕ ಬಿಂಕದಕಟ್ಟಿ ಅಭಿಮಾನಿ ಬಳಗ ಸಂಯುಕ್ತಾಶ್ರಯದಲ್ಲಿ ಒಂದು ತಿಂಗಳ ಪರ್ಯಂತ ನಡೆಯುವ 17ನೇ ವರ್ಷದ ಶ್ರಾವಣ ಸಂಜೆ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಪ್ರಸ್ತುತ ದಿನಮಾನಗಳಲ್ಲಿ ದೂರದರ್ಶನ, ಮೊಬೈಲ್, ಕಂಪ್ಯೂಟರ್ ಪ್ರಭಾವದಿಂದ ಪುರಾಣ ಪ್ರವಚನಗಳಿಂದ ದೂರ ಸರಿಯುತ್ತಿರುವುದರಿಂದ ಧಾರ್ಮಿಕ ಮನೋಭಾವ ಕಡಿಮೆಯಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ನಿಟ್ಟಿನಲ್ಲಿ ಮಹಿಳಾ ಬಳಗದವರು ಕೈಗೊಳ್ಳುವ ಸತ್ಸಂಗ, ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಉತ್ತಮ ವೇದಿಕೆಗಳಾಗಿದ್ದು ಪ್ರತಿಯೊಬ್ಬರೂ ತಮ್ಮ ನಿತ್ಯದ ಬದುಕಿನ ಜಂಜಾಟದ ನಡುವೆ ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ ಪರಶುರಾಮ ಸತ್ತಿಗೇರಿ ಅವರು ಕೃಷಿ ಪ್ರಧಾನ ನಾಡಿನಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಹಬ್ಬ, ಆಚರಣೆ, ಸಂಪ್ರದಾಯ, ಧರ್ಮಕಾರ್ಯ, ಪುರಾಣ-ಪ್ರವಚನ ಕೇಳುವ ಮೂಲಕ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣ ಕೊಡಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಪಿಸಿಆರ್‍ಡಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಮತ್ತು ರೈತ ಮುಖಂಡರಾದ ಡಿ.ಬಿ. ಬಳಿಗಾರ ಮಾತನಾಡಿ, ಕಳೆದ 16 ವರ್ಷಗಳಿಂದ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ದಿ. ಪ್ರೇಮಕ್ಕ ಬಿಂಕದಕಟ್ಟಿ ಅವರ ನೇತೃತ್ವದಲ್ಲಿ ಶ್ರಾವಣ ಮಾಸದ ಕಾರ್ಯಕ್ರಮ ಮಾಡುತ್ತಾ ಬರಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಧರ್ಮದ ವಿಚಾರ, ಚಿಂತನ- ಮಂಥನ, ಶರಣರ ಕುರಿತು ಉಪನ್ಯಾಸಗಳು, ಸಾಹಿತ್ಯ, ವಚನಗಳ ಮಹತ್ವ, ಸ್ವಾತಂತ್ರ ಹೋರಾಟಗಾರರ ಬಗ್ಗೆ ಕುರಿತು ವಿವಿಧ ಉಪನ್ಯಾಸರಿಂದ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಶಿಕ್ಷಕ ಬಿ.ಬಿ. ಬಳಿಗಾರ ಅವರು ಅಮುಗೆ ದೇವಯ್ಯ ರಾಯಮ್ಮ ಶರಣ ದಂಪತಿಗಳ ಕುರಿತು ಉಪನ್ಯಾಸ ನೀಡಿದರು.ನಿವೃತ್ತ ಶಿಕ್ಷಕಿ ಲಲಿತಾ ಕೆರಿಮನಿ ಪ್ರಾಸ್ತಾವಕ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ, ಉಪಾಧ್ಯಕ್ಷೆ ಮಂಜವ್ವ ನಂದೆಣ್ಣನವರ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್. ಎಸ್ ಅರಳಹಳ್ಳಿ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ಪ್ರತಿಮಾ ಮಹಾಜನಶೆಟ್ಟರ, ರೇಖಾ ವಡಕಣ್ಣವರ, ಈಶ್ವರ ಮೆಡ್ಲೇರಿ, ಎಸ್.ಬಿ. ಕೊಣ್ಣೂರ ಸೇರಿ ಹಲವರಿದ್ದರು. ರತ್ನಾ ಕರ್ಕಿ ನಿರೂಪಿಸಿದರು.