ಶ್ರಾವಣ ಸಂಜೆ ಕಾರ್ಯಕ್ರಮಕ್ಕೆ ಚಾಲನೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ18: ಶ್ರಾವಣ ಮಾಸದ ನಿಮಿತ್ತ ಇಲ್ಲಿನ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಗುರುವಾರದಿಂದ ಆರಂಭವಾದ ಶ್ರಾವಣ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಸಕ ಡಾ.ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಶರಣರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಹೆಸರಿಗಷ್ಟೆ ಶರಣರನ್ನು ನೆನೆಯದೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಅಂದಾಗ ಮಾತ್ರ ಅವರ ತತ್ವಗಳಿಗೆ ಒಂದು ಅರ್ಥ ಬರುತ್ತದೆ' ಎಂದರು. ಸಾನ್ನಿಧ್ಯ ವಹಿಸಿದ್ದ ಗಂಜಿಗಟ್ಟಿ ಚರಮೂರ್ತೀಶ್ವರಮಠದ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ. ಧರ್ಮಾಚರಣೆಯಿಂದ ಸಮಾಜದಲ್ಲಿ ಸುಖ, ಸಂತೋಷ ನೆಲೆಗೊಳ್ಳುತ್ತವೆ. ಪವಿತ್ರವಾದ ಶ್ರಾವಣ ಮಾಸದಲ್ಲಿ ಉತ್ತಮ ಮಾತುಗಳನ್ನು ಶ್ರವಣ ಮಾಡುವುದು ಮುಖ್ಯ. ಒಂದು ತಿಂಗಳ ಪಯರ್ಂತ ದೇವರ ನಾಮಸ್ಮರಣೆ ಮಾಡುವ ಭಾಗ್ಯ ಈ ಮಾಸದಲ್ಲಿ ಲಭಿಸುತ್ತದೆ’ ಎಂದರು.
ಶಿವಣ್ಣ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಮಹಾಜನಶೆಟ್ಟರ ಉಪನ್ಯಾಸ ನೀಡಿದರು. ಜಯಕ್ಕ ಗಡ್ಡದೇವರಮಠ, ಡಾ.ವಿರುಪಾಕ್ಷಪ್ಪ ಬಿಂಕದಕಟ್ಟಿ, ನಿರ್ಮಲಾ ಅರಳಿ, ಪೂರ್ಣಾಜಿ ಖರಾಟೆ, ಸಿ.ಜಿ. ಹಿರೇಮಠ, ಸರೋಜಕ್ಕ ಬನ್ನೂರ, ಪಾರ್ವತಿ ಕಳ್ಳಿಮಠ, ವಿ.ವಿ. ಗೊಲ್ಲರ, ತಾಲ್ಲೂಕು ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಎಸ್.ಬಿ. ಅಣ್ಣಿಗೇರಿ, ಎನ್.ಆರ್. ಸಾತಪುತೆ, ವೆಂಕಟೇಶ ಮಾತಾಡೆ, ಬಸಣ್ಣ ಬೆಂಡಿಗೇರಿ ಮತ್ತಿತರರು ಇದ್ದರು. ರತ್ನ ಕರ್ಕಿ ನಿರೂಪಿಸಿದರು. ಶೋಭಾ ಗಾಂಜಿ ಸ್ವಾಗತಿಸಿದರು. ಎಲ್.ಎಸ್. ಅರಳಹಳ್ಳಿ ವಂದಿಸಿದರು.